Home Uncategorized ದೇವರಕಾನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ದೇವರಕಾನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

1814
0
SHARE

ಸುಬ್ರಹ್ಮಣ್ಯ : ಮುರುಳ್ಯ ಗ್ರಾಮದ ಐತಿಹಾಸಿಕ ದೇವರಕಾನ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೆ ಭಕ್ತಿ ಸಡಗರದಿಂದ ಇತ್ತೀಚೆಗೆ ನಡೆಯಿತು.

ದೇಗುಲದಲ್ಲಿ ಸಾಮೂಹಿಕ ಶ್ರೀ ಸತ್ಯನಾ ರಾಯಣ ಪೂಜೆಯು ನೆರವೇರಿತು. ವೇ| ಮೂ| ನೀಲೇಶ್ವರ ಕೆ.ಯು. ದಾಮೋದರ ತಂತ್ರಿಗಳು ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೆ ಹಾಗೂ ವಿವಿಧ ವೈದಿಕ ವಿಧಿವಿಧಾನ ನೆರವೇರಿಸಿದರು.ಅವರಿಗೆ ದೇಗುಲದ ಪ್ರಧಾನ ಅರ್ಚಕ ವೇ| ಮೂ| ಕೆ.ಸೂರ್ಯನಾರಾಯಣ ಭಟ್‌ ಮತ್ತು ಪೂದೆ ಸೂರ್ಯನಾರಾಯಣ ಉಪಾಧ್ಯಾಯ ಸಹಕರಿಸಿದರು.

ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದ ಬಳಿಕ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹಃ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮಹಾಪೂಜೆ ನಡೆಯಿತು. ಬಳಿಕ ಗಣಪತಿ ಹವನ, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಅನಂತರ ಬಲಿ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಸಂಪೊÅàಕ್ಷಣೆ, ತೀರ್ಥಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಯಶ್ರೀ ಉದಯಕುಮಾರ್‌ ರೈ ಅವರಿಂದ ದಾನ ಶೂರ ಕರ್ಣ ಎಂಬ ಹರಿಕಥಾ ಕಾಲಕ್ಷೇಪ ನಡೆಯಿತು. ಬಳಿಕ ಯಕ್ಷರಂಗ ಬೆಳ್ಳಾರೆ ಇದರ ಮಕ್ಕಳ ತಂಡದಿಂದ ಶ್ರೀಕೃಷ್ಣ ಲೀಲಾಮತ ಯಕ್ಷಗಾನ ಬಯಲಾಟ ನಡೆಯಿತು.

ಸೇವಾ ಟ್ರಸ್ಟ್‌ ಅಧ್ಯಕ್ಷ ವಿಠಲ ರೈ ಪೋಳಾಜೆ, ಉಪಾಧ್ಯಕ್ಷರಾದ ಭಾಸ್ಕರ ಮುರುಳ್ಯ, ಕೇಶವ ಭಟ್‌ ಮಾನಸವನ, ಕಾರ್ಯದರ್ಶಿ ಜನಾರ್ಧನ ಅಲೆಕ್ಕಾಡಿ, ಕೋಶಾಧಿ ಕಾರಿ ಡಾ| ಪಿ.ರಾಮಚಂದ್ರ ಭಟ್‌ ದೇವಸ್ಯ, ಸದಸ್ಯರಾದ ಕೆ.ವಿ. ಗಣಪಯ್ಯ ಆಲಾಜೆ, ಎಂ.ಬಿ.ವಸಂತ ಕುಮಾರ್‌, ಶ್ರೀಕರ ಆಚಾರ್‌ ಕಳತ್ತಜೆ, ಅನೂಪ್‌ ಬಿಳಿಮಲೆ, ವಿ. ಚೆನ್ನಪ್ಪ ಗೌಡ ಆಲೇಕಿ, ಕುಶಾಲಪ್ಪ ಗೌಡ ಪೋಳಾಜೆ, ಪಿ.ಸುಂದರ ರೈ, ಬೆಳ್ಯಪ್ಪ ಗೌಡ, ಜಗದೀಶ್‌ ಹುದೇರಿ, ರಕ್ಷಿತ್‌ ರೈ ಸಹಿ ತ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here