Home ಧಾರ್ಮಿಕ ಸುದ್ದಿ ಕಾವುಗೋಳಿ ಮಹಾವಿಷ್ಣು ದೇಗುಲದ ವಾರ್ಷಿಕೋತ್ಸವ

ಕಾವುಗೋಳಿ ಮಹಾವಿಷ್ಣು ದೇಗುಲದ ವಾರ್ಷಿಕೋತ್ಸವ

1589
0
SHARE

ಕಾಸರಗೋಡು: ಕಾವುಗೋಳಿ ಶ್ರೀ ಮಹಾವಿಷ್ಣು ದೇವಾಲಯದ ವರ್ಷಾವಧಿ ಜಾತ್ರೆ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ, ಲಕ್ಷಾರ್ಚನೆ, ನವಕಾಭಿಷೇಕ, ಮಧೂರು ಶ್ರೀ ಮಹಾಗಣಪತಿ ಮಹಿಳಾ ಭಜನ ಸಂಘದಿಂದ ಭಜನೆ, ತುಲಾಭಾರ ಸೇವೆ, ಮಹಾಪೂಜೆ, ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಭಕ್ತಿಗಾನಸುಧಾ, ದೀಪಾರಾಧನೆ, ತಾಯಂಬಕ, ಶ್ರೀ ಮಹಾವಿಷ್ಣು ಭಜನ ಸಂಘ ಕಾವುಗೋಳಿ ಇವರಿಂದ ಭಜನೆ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ, ಶ್ರೀ ದೇವರ ಉತ್ಸವ ಬಲಿ, ಶ್ರೀ ಕ್ಷೇತ್ರದ ಅಶ್ವತ್ಥಕಟ್ಟೆಗೆ ಶೋಭಾಯಾತ್ರೆ, ವಿಶೇಷ ಸಿಡಿಮದ್ದು ಪ್ರದರ್ಶನ, ಕಟ್ಟೆ ಪೂಜೆ, ಬಳಿಕ ಶ್ರೀ ಕ್ಷೇತ್ರಕ್ಕೆ ಹಿಂದಿರುಗಿ ದರ್ಶನ ಬಲಿ, ರಾಜಾಂಗಣ ಪ್ರಸಾದ ವಿತರಣೆ, ನೃತ್ಯ ವೈಭವ, ಶ್ರೀ ವಿಷ್ಣುಮೂರ್ತಿ ದೈವದ ಕೋಲ ಮೊದಲಾದವು ಜರಗಿದವು.

LEAVE A REPLY

Please enter your comment!
Please enter your name here