ಕೆಮ್ಮಾಯಿ: ಯುವ ಸಮುದಾಯ ಸದಾ ಚಟುವಟಿಕೆಗಳಲ್ಲಿದ್ದು, ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕು ಎಂದು ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.
ಇಲ್ಲಿನ ಶ್ರೀ ವಿಷ್ಣು ಯುವಕ ಮಂಡಲದ 22ನೇ ವರ್ಷದ ವಾರ್ಷಿಕೋತ್ಸವ, ಅಶ್ವತ್ಥ ಮಹೋತ್ಸವ, ಶನೈಶ್ಚರ ವ್ರತ ಕಲ್ಪೋಕ್ತ ಪೂಜೆ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟುವಂತೆ ಯುವ ಸಮುದಾಯ ಕೆಲಸ ಮಾಡಬೇಕೆಂದರು.
ಬಜರಂಗ ದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ಭಾರತ ಬದಲಾಗುತ್ತಿದೆ. ನಮ್ಮ ಸಂಸ್ಕೃತಿ, ಆಚರಣೆಗಳ ಮೇಲೆ ಆಕ್ರಮಣವೂ ಹೆಚ್ಚುತ್ತಿದೆ. ಧರ್ಮಕ್ಕೆ ತಾಯಿಯ ಸ್ಥಾನವನ್ನು ನೀಡಿರುವ ನಾವು ಅದರ ರ್ಷಣೆಯ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.
ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಮೆಸ್ಕಾಂ ಕಿರಿಯ ಅಭಿಯಂತರ ಸುಂದರ, ನಗರಸಭಾ ಸದಸ್ಯೆ ಲೀಲಾವತಿ, ನರೇಂದ್ರ ಪಡಿವಾಳ್ ಉಪಸ್ಥಿತರಿದ್ದರು.
ಹರ್ಷಿತ್ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು. ನಾಗೇಶ್ ಟಿ.ಎಸ್. ಕಾರ್ಯಕ್ರಮ ನಿರ್ವಹಿಸಿದರು.