Home ಧಾರ್ಮಿಕ ಸುದ್ದಿ ಅಂಕುದ್ರು: ಪರಿವಾರ ದೈವಗಳ ಸಿರಿ ಸಿಂಗಾರದ ಕೋಲ

ಅಂಕುದ್ರು: ಪರಿವಾರ ದೈವಗಳ ಸಿರಿ ಸಿಂಗಾರದ ಕೋಲ

741
0
SHARE

ಕಟಪಾಡಿ 29: ಗ್ರಾಮಸ್ಥರು ಆರಾಧಿಸಿಕೊಂಡು ಬಂದಿರುವ ನೂತನವಾಗಿ ಜೀರ್ಣೋದ್ಧಾರಗೊಂಡು ಪ್ರತಿಷ್ಠೆಗೊಂಡ ಅಂಕುದ್ರು ಶ್ರೀ ಬಬ್ಬರ್ಯ, ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ಕೋಲ ವಿಜೃಂಭಣೆಯಿಂದ ಜರಗಿತು. ಜೀರ್ಣೋದ್ಧಾರಗೊಂಡ ದೇವಾ ಲಯದಲ್ಲಿ ಸಂಜೆ 6.00 ಗಂಟೆಗೆ ಭಂಡಾರ ಇಳಿದು ಬ್ರಹ್ಮ ಮಹಿಷಾಂತಕ,  ಬಬ್ಬರ್ಯ, ಬಬ್ಬುಸ್ವಾಮಿ ಪರಿವಾರ ಸಹಿತ ಸತ್ಯದ ಕಂಬೇರ್ಲು ಹಾಗೂ ಕೊರಗಜ್ಜ ದೈವಗಳ ಸಿರಿ ಸಿಂಗಾರದ ಕೋಲ ನಡೆಯಿತು.

ಈ ಸಂದರ್ಭ ಕ್ಷೇತ್ರದ ಅರ್ಚಕರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪಠೇಲರ ಮನೆ ಯತಿರಾಜ್‌ ಶೆಟ್ಟಿ, ಅಧ್ಯಕ್ಷ ಮಿಥೇಶ್‌ ಸುವರ್ಣ ಮೂಡುಮನೆ ಕುಟುಂಬಸ್ಥರು, ಉಪಾಧ್ಯಕ್ಷ ಪ್ರಭಾಕರ ಕೋಟ್ಯಾನ್‌ ಪಡುಮನೆಕುಟುಂಬಸ್ಥರು, ಕಾರ್ಯದರ್ಶಿ ಬಾಲಕೃಷ್ಣ, ಕೋಶಾಧಿ ಕಾರಿ ತಿಲಕ್‌ರಾಜ್‌, ಜಿತೇಂದ್ರ ಶೆಟ್ಟಿ ಉದ್ಯಾವರ, ವಿಜಯ ಬಂಗೇರ, ವಿಜಯ ಉಪ್ಪುಗುಡ್ಡೆ, ಸುಕುಮಾರ್‌, ದಿನೇಶ್‌ ಉಪ್ಪುಗುಡ್ಡೆ, ಬೊಮ್ಮು ಗುರಿಕಾರ, ಹಾಗೂ ಊರಿನ ಹತ್ತು ಸಮಸ್ತರು, ಜೀಣೋದ್ಧಾರ ಸಮಿತಿ ಪದಾಧಿಕಾರಿಗಳು, ಸರ್ವಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here