Home ಧಾರ್ಮಿಕ ಸುದ್ದಿ ಆಂಜನೇಯ ಮಂತ್ರಾಲಯ:ದೇವಿಯ ಶೋಭಾಯಾತ್ರೆ

ಆಂಜನೇಯ ಮಂತ್ರಾಲಯ:ದೇವಿಯ ಶೋಭಾಯಾತ್ರೆ

1343
0
SHARE

ಬೊಳುವಾರು : ಇಲ್ಲಿನ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಅ. 10ರಂದು ಪ್ರಾರಂಭಗೊಂಡಿದ್ದ ನವರಾತ್ರಿ ಪೂಜೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅ. 18ರಂದು ದೇವಿಯ ವೈಭವದ ಶೋಭಾಯಾತ್ರೆ ಮೂಲಕ ಸಂಪನ್ನಗೊಂಡಿದೆ.

ಅ. 18ರಂದು ಸಂಜೆ ಗಂಗಣ್ಣ ಮತ್ತು ಚಂದ್ರಶೇಖರ ಸ್ಮರಣಾರ್ಥ ಬಾಲಕೃಷ್ಣ ಮತ್ತು ಬಳಗದವರಿಂದ ತಾಲೀಮು ಮತ್ತು ಬೆಂಕಿಯಾಟ ಪ್ರದರ್ಶನ, ರಾಧಾಕೃಷ್ಣ ಶೆಟ್ಟಿ ಅವರಿಂದ ಹಾಗೂ ಇತರ ತಂಡದವರಿಂದ ಹುಲಿಯಾಟ ಪ್ರದರ್ಶನ ನಡೆಯಿತು.

ಉರ್ಲಾಂಡಿಯಿಂದ ಭಜನೆ ಮೂಲಕ ಫ‌ಲವಸ್ತು ತಂದು ಮಂತ್ರಾಲಯದಲ್ಲಿ ಅರ್ಪಣೆ ಮಾಡಿದ ಬಳಿಕ ನವರಾತ್ರಿಯ ಶೋಭಾಯಾತ್ರೆ ಹೊರಟಿತು. ಮಂತ್ರಾಲಯದ ಧರ್ಮದರ್ಶಿ ನಾರಾಯಣ ಮಣಿಯಾಣಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂತ್ರಾಲಯದಿಂದ ಹೊರಟಮ ಶೋಭಾಯಾತ್ರೆ, ಮುಖ್ಯ ರಸ್ತೆಯಾಗಿ ಕೋರ್ಟ್‌ ರಸ್ತೆಯ ಮೂಲಕ ಎಂ. ಸಂಜೀವ ಶೆಟ್ಟಿ ಅಂಗಡಿ ಬಳಿಯಿಂದ ಪುನಃ ಬೊಳುವಾರು ಮಂತ್ರಾಲಯಕ್ಕೆ ತೆರಳಿ ಸಮಾಪನಗೊಂಡಿತು.

ಭಜನಾ ತಂಡ, ಹನುಮಂತನ ಸ್ತಬ್ಧ ಚಿತ್ರ ಮತ್ತು ಹುಲಿವೇಷಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here