ತೆಕ್ಕಟ್ಟೆ: ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ಶ್ರೀ ದೇಗುಲವನ್ನು ಸಂಪೂರ್ಣ ಹೂವಿನಿಂದ ಅಲಂಕರಿಸಲಾಗಿದೆ.
ಹರಿದು ಬಂದ ಭಕ್ತ ಸಾಗರ
ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಕ್ಕೆ ಮುಂಜಾನೆಯಿಂದಲೂ ನಂಬಿದ ಸಾವಿರಾರು ಭಕ್ತರು ಶ್ರೀ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾದರು. ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಪಿಲಿಕಿಲಿ ತಂಡಗಳಿಂದ ಆಕರ್ಷಕ ಕೀಲು ಕುದುರೆ, ಗೊಂಬೆಗಳ ನೃತ್ಯ, ವಿವಿಧ ವೇಷಗಳು, ತಟ್ಟಿರಾಯ, ಚಂಡೆವಾದನ ಒಂದೆಡೆಯಾದರೆ ಮತ್ತೊಂದೆಡೆಯಲ್ಲಿ ಅಲ್ಲಲ್ಲಿ ಸೆಲ್ಫಿ ಪ್ರಿಯರು ಮೊಬೈಲ್ನಲ್ಲಿ ದೃಶ್ಯವಳಿಗಳನ್ನು ಸೆರೆ ಹಿಡಿಯುತ್ತಿರುವ ದೃಶ್ಯ ಸಾಮಾನ್ಯಕಂಡು ಬಂತು.
ಈ ಸಂದರ್ಭದಲ್ಲಿ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಆನುವಂಶಿಕ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಕೆ. ವಿಟuಲ ಉಪಾಧ್ಯಾಯ ಹಾಗೂ ಆನುವಂಶಿಕ ಪರ್ಯಾಯ ಅರ್ಚಕರಾಗಿ ಕೆ. ಸೂರ್ಯನಾರಾಯಣ ಉಪಾ ಧ್ಯಾಯ ಮತ್ತು ಸಹೋದರರು, ಮನೇಜರ್ ಆನಂದರಾಮ ಉರಾಳ ಹಾಗೂ ಸಿಬಂದಿ ಉಪಸ್ಥಿತರಿದ್ದರು.
ವಿಶೇಷ ಕೇಸರಿ ಪಾನಕ ವಿತರಣೆ
ಭಕ್ತರ ದಣಿವು ನೀಗಿಸುವ ನಿಟ್ಟಿನಿಂದ ಕಳೆದ ಐವತ್ತು ವರ್ಷಗಳಿಂದಲೂ ಶಿವಮೊಗ್ಗದ ದಿ| ಅಡ್ಡೆ ನಾರಾಯಣ ಭಟ್ ಮತ್ತು ಮಕ್ಕಳು ಪ್ರಸ್ತುತ ಸುಮಾರು 2 ಕ್ವಿಂಟಾಲ್ಗೂ ಅಧಿಕ ಸಕ್ಕರೆಯ ಕೇಸರಿ ಪಾನಕವನ್ನು ವಿತರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ, ಅಲ್ಲದೆ ಈ ಮೊದಲು 10 ಕ್ವಿಂಟಾಲ್ಗೂ ಅಧಿಕ ಸಕ್ಕರೆಯಿಂದ ಪಾನಕವನ್ನು ಪಾನಕ ಸಮಿತಿಯ ವತಿಯಿಂದ ವಿತರಿಸುತ್ತಿರುವ ದೃಶ್ಯ ಕಂಡು ಬಂತು.