ಕಲಬುರಗಿ: ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಆರಾಧ್ಯ ದೈವ ಕರುಣೇಶ್ವರ ರಥೋತ್ಸವ ಸಾವಿರಾರು ಭಕ್ತರ ಜಯಘೋಷದ ಮಧ್ಯೆ ನಡೆಯಿತು.
ಮಠದ ಪೀಠಾಧಿಪತಿ ಸಿದ್ಧಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಸಂಜೆ ರಥೋತ್ಸವವು ಮೂಲ ಸ್ಥಳದಿಂದ ಪ್ರಾರಂಭಗೊಂಡು, ಕರುಣೇಶ್ವರ ಗದ್ದಿಗೆ ಹತ್ತಿರ ಸಾಗಿ ತದನಂತರ ಪುನಃ ಮೂಲ ಸ್ಥಳಕ್ಕೆ ಬಂದು ತಲುಪಿತು. ಇದೇ ವೇಳೆ ಸಾವಿರಾರು ಭಕ್ತರು ಕರುಣೇಶ್ವರ ಮಹಾ ರಾಜಕೀ ಜೈ ಎನ್ನುವ ಜಯ ಘೋಷದ ನಡುವೆ ರಥೋತ್ಸವಕ್ಕೆ ಬಾಳೆ ಹಣ್ಣು, ಉತ್ತತ್ತಿ ಎಸೆದರು.
ವಿವಿಧ ಮಠಾಧೀಶರಾದ ಶಖಾಪುರದ ಶ್ರೀ ಡಾ| ಸಿದ್ಧರಾಮ ಶಿವಾ ಚಾರ್ಯರು, ಬಬಲಾದನ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ, ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಶ್ರೀ ರೇಣುಕಾ ಶಿವಾಚಾರ್ಯರು, ಶ್ರೀ ಚನ್ನವೀರ ಶಿವಾಚಾರ್ಯರನ್ನು ಸಾರೋಟಾನಲ್ಲಿ ಕೂಡಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.