ಕುಂಬಳೆ :
ಪ್ರಸಿದ್ಧ ಆರಾಧನಾ ಕ್ಷೇತ್ರ, ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಸರೋವರ ಕ್ಷೇತ್ರ ಅನಂತಪುರಕ್ಕೆ ಕೇರಳ ದೇವಸ್ವಂ ವಿಭಾಗದ ಗಣ್ಯರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಚಟುವಟಿಕೆಗಳ ಅವಲೋಕನ ನಡೆಸಿದರು.ಕೇರಳ ದೇವಸ್ವಂ ಬೋರ್ಡ್ ಅಧ್ಯಕ್ಷ ಓ.ಕೆ. ವಾಸು, ಕಮಿಷನರ್ ಮುರಳಿ, ದೇವಸ್ವಂ ಬೋರ್ಡ್ ಸದಸ್ಯ ಕೊಟ್ಟಾರಂ ವಾಸುದೇವನ್, ಅನಂತಪುರ ಶ್ರೀ ಕ್ಷೇತ್ರದ ಪ್ರಬಂಧಕ ಲಕ್ಷ್ಮಣ ಹೆಬ್ಟಾರ್, ಕಾರ್ಯನಿರ್ವಹಣಾಧಿಕಾರಿ ರಾಮನಾಥ ಶೆಟ್ಟಿ, ಸ್ಥಳೀಯರಾದ ರಾಘವನ್ ನಾಯರ್, ಶಂಕರಪ್ರಸಾದ್ ಕುಂಬಳೆ ಮೊದಲಾದವರು ಜತೆಗಿದ್ದು, ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.