Home ಧಾರ್ಮಿಕ ಸುದ್ದಿ ಅಮ್ಮುಂಜೆ : ಏಕಾಹ ಭಜನೆಗೆ ಚಾಲನೆ

ಅಮ್ಮುಂಜೆ : ಏಕಾಹ ಭಜನೆಗೆ ಚಾಲನೆ

391
0
SHARE

ಬಂಟ್ವಾಳ : ತಾಲೂಕಿನ ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ಶ್ರೀ ವಿನಾಯಕ ಭಜನ ಮಂಡಳಿಯ 13ನೇ ವರ್ಧಂತ್ಯುತ್ಸವದ ಪ್ರಯುಕ್ತ ಏಕಾಹ ಭಜನೆಗೆ ಶನಿವಾರ ಚಾಲನೆ ನೀಡಲಾಯಿತು.

ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ನಾಗೇಶ್‌ ರಾವ್‌, ಹರೀಶ್‌ ರಾವ್‌, ಮಾದುಕೋಡಿ ವಿಜಯ ಸುವರ್ಣ, ಸೋಮಶೇಖರ ಶೆಟ್ಟಿ, ಚಂದ್ರಶೇಖರ ಭಂಡಾರಿ, ಈಶ್ವರ ಪೂಜಾರಿ, ವಾಮನ ಆಚಾರ್ಯ, ಗಂಗಾಧರ ಪೂಜಾರಿ, ವಿನಾಯಕ ಭಜನ ಮಂಡಳಿ ಸದಸ್ಯರು, ವೀರಯೋಧ ಯಾದವ ಫ್ರೆಂಡ್ಸ್‌ ಸದಸ್ಯರು ಉಪಸ್ಥಿತರಿದ್ದರು.

ಏಕಾಹ ಭಜನೆಯಲ್ಲಿ ಶನಿವಾರ ಸೂರ್ಯೋದಯದಿಂದ ನ. 17ರ ಬೆಳಗ್ಗೆ ಸೂರ್ಯೋದಯದವರೆಗೆ ವಿವಿಧ ಭಜನ ತಂಡಗಳಿಂದ ಭಜನ ಸಂಕೀರ್ತನೆ ನಡೆಯಲಿದೆ.

LEAVE A REPLY

Please enter your comment!
Please enter your name here