Home ಧಾರ್ಮಿಕ ಕಾರ್ಯಕ್ರಮ ಅಂಬಾರು ಶ್ರೀ ಸದಾಶಿವ ಕ್ಷೇತ್ರ ಬ್ರಹ್ಮಕಲಶಾಭಿಷೇಕ ಸಂಪನ್ನ

ಅಂಬಾರು ಶ್ರೀ ಸದಾಶಿವ ಕ್ಷೇತ್ರ ಬ್ರಹ್ಮಕಲಶಾಭಿಷೇಕ ಸಂಪನ್ನ

1836
0
SHARE

ಕುಂಬಳೆ: ಕಳೆದ ಫೆ. 28ರಂದು ಆರಂಭಗೊಂಡ ಮಂಗಲ್ಪಾಡಿ ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು.

ಕೊನೆಯ ದಿನದ ಸಮಾರೋಪ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಆನೆಗುಂದಿ ಸರಸ್ವತೀ ಪೀಠದ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ಬಡಾಜೆಬೂಡು ಗೋಪಾಲಕೃಷ್ಣ ತಂತ್ರಿವರ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಿ. ಕೃಷ್ಣಪ್ಪ ಪೂಜಾರಿ ದೇರಂಬಳ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ವಿದ್ವಾನ್‌ ಅರುಣ್‌ ರಾಜ್‌ ವಿ. ಅಂಬಾರು ಧಾರ್ಮಿಕ ಉಪನ್ಯಾಸ ಮಾಡಿದರು. ಪ್ರಮುಖರಾದ ಪ್ರಮೋದ್‌ ಕರ್ಕೇರ, ಕೋಳಾರು ಸತೀಶ್ಚಂದ್ರ ಭಂಡಾರಿ, ರಾಮಣ್ಣ ಶೆಟ್ಟಿ, ಪಂಜ, ಭುಜೇಶ್‌ ಪೂಜಾರಿ, ಬಾಬು ರೈ,ಪರಂಕಿಲ, ಶಿವರಾಮ ಪಕಳ, ಯಂ. ರಾಮ, ದಿವಾಕರ ಆಳ್ವ, ಗೋಪಾಲ ಸಾಲ್ಯಾನ್‌, ಬಾಲಕೃಷ್ಣ ಅಂಬಾರ್‌ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕ್ಷೇತ್ರದಲ್ಲಿ ಸೇವೆಗೈದ ಉದಯ ಕುಮಾರ್‌ ಪ್ರತಾಪ ನಗರ, ಶಿವಾನಂದ ಶೆಟ್ಟಿ ತಿಂಬರ, ಮೋಹನಪಡ್ಪು  ಚೆರುಗೋಳಿ,ಶ್ರೀಧರ ಬೀರಿಗುಡ್ಡೆ,ಐತಪ್ಪ ಚೆರುಗೋಳಿ, ಶ್ರೀನಿವಾಸ ಭಟ್‌ ಮತ್ತು ಮಹೇಶ್‌ ವೀರನಗರ ಅವರನ್ನು ಸಮ್ಮಾನಿಸಲಾಯಿತು. ದಿನೇಶ್‌ ಚೆರುಗೋಳಿ ಸ್ವಾಗತಿಸಿದರು. ಚಂದ್ರಶೇಖರ ಶೆಟ್ಟಿ ವಂದಿಸಿದರು. ತಿಮ್ಮಪ್ಪ ಪಿ ನಿರೂಪಿಸಿದರು. ಮಾ. 6ರಿಂದ ವಾರ್ಷಿಕ ಉತ್ಸವ ಆರಂಭಗೊಂಡಿತು.

ಶ್ರೀ ಕ್ಷೇತ್ರದ ಪಕ್ಕದಲ್ಲಿರುವ ಚೆರುಗೋಳಿ ಬದರ್‌ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ಲ ಕುಂಞಿ ಅಂದು ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಭೇಟಿ ನೀಡಿದರು. ಕ್ಷೇತ್ರದಲ್ಲಿ ಮಹಿಳೆಯರ ಸಹಿತ ಭಕ್ತ ಸ್ವಯಂಸೇವಕರು ರಾತ್ರಿ ಹಗಲೆನ್ನದೆ ಸ್ವಯಂಸೇವೆ ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಮುಕ್ತ ಪ್ರಂಶಸೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here