Home ಧಾರ್ಮಿಕ ಸುದ್ದಿ ಅಂಬಲಪಾಡಿ ಕಪ್ಪೆಟ್ಟು ಬ್ರಹ್ಮಬೈದರ್ಕಳ ಗರೋಡಿ ಪುನರ್‌ಪ್ರತಿಷ್ಠೆ, ಬ್ರಹ್ಮಕಲಶ ವೈಭವದ ಹೊರೆಕಾಣಿಕೆ ಮೆರವಣಿಗೆ

ಅಂಬಲಪಾಡಿ ಕಪ್ಪೆಟ್ಟು ಬ್ರಹ್ಮಬೈದರ್ಕಳ ಗರೋಡಿ ಪುನರ್‌ಪ್ರತಿಷ್ಠೆ, ಬ್ರಹ್ಮಕಲಶ ವೈಭವದ ಹೊರೆಕಾಣಿಕೆ ಮೆರವಣಿಗೆ

1537
0
SHARE

ಮಲ್ಪೆ: ಅಂಬಲಪಾಡಿ ಕಪ್ಪೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಬ್ರಹ್ಮ ಬೈದರ್ಕಳ, ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಮಾಯಂದಾಲ್‌ ಮತ್ತು ಪರಿವಾರ ದೈವಗಳ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬುಧವಾರ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಿಂದ ವಿವಿಧ ವಾದ್ಯ ಘೋಷ, ವೇಷಭೂಷಣಗಳೊಂದಿಗೆ ಹೊರಟ ಮೆರವಣಿಗೆಯು ಕಿನ್ನಿಮೂಲ್ಕಿ ಸ್ವಾಗತಗೋಪುರದ ಮೂಲಕ ಗರೋಡಿಗೆ ಸಾಗಿ ಬಂತು. ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇಗುಲ ಧರ್ಮದರ್ಶಿ ಡಾ| ನಿ. ಬಿ. ವಿಜಯ ಬಲ್ಲಾಳ್‌ ಮೆರವಣಿಗೆಗೆ ಚಾಲನೆ ನೀಡಿದರು.

ಶಾಸಕ ರಘುಪತಿ ಭಟ್‌, ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಗರಡಿಯ ಆಡಳಿತ ಮಂಡಳಿ ಗೌರವಾಧ್ಯಕ್ಷ ಗುಂಡು ಶೆಟ್ಟಿ ಕಂಬಳಮನೆ, ಅಧ್ಯಕ್ಷ ಸೂರ್ಯ ಪ್ರಕಾಶ್‌ ಕೆ., ಕಾರ್ಯದರ್ಶಿ ಶಿವರಾಮ ಶೆಟ್ಟಿ, ಅರ್ಚಕ ಮುದ್ದು ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ್‌ ಸುವರ್ಣ, ಗೌರವ ಸಲಹೆಗಾರರಾದ ಸೀತಾರಾಮ ಶೆಟ್ಟಿ, ಎಂ.ಕೆ. ಸನಿಲ್‌, ಉಪಾಧ್ಯಕ್ಷರಾದ ರತ್ನಾಕರ್‌ ಶೆಟ್ಟಿ ಕಂಬಳಮನೆ, ಗಣೇಶ್‌ ಶೆಟ್ಟಿ, ವಿಜಯ ಶೆಟ್ಟಿ, ರಾಘವೇಂದ್ರ ಅಂಬಲಪಾಡಿ, ಗಣೇಶ್‌ ಪೂಜಾರಿ, ರವೀಶ್‌ ಪೂಜಾರಿ, ಕಾರ್ಯದರ್ಶಿಗಳಾದ ಸುದರ್ಶನ್‌ ಕಪ್ಪೆಟ್ಟು, ಜಗದೀಶ್‌ ಆಚಾರ್ಯ, ಉಮೇಶ್‌ ಶೆಟ್ಟಿ ಕಂಬಳಮನೆ, ಮೋಹನ್‌ ಶೆಟ್ಟಿ, ಸುನಿಲ್‌ ಕಪ್ಪೆಟ್ಟು, ಚಂದ್ರಹಾಸ ಶೆಟ್ಟಿ, ಬಾಲಚಂದ್ರ ಶೇರಿಗಾರ್‌, ಗಣೇಶ್‌ ಪೂಜಾರಿ ಗಟ್ಲೆಮನೆ, ಕೋಶಾಧಿಕಾರಿಗಳಾದ ಅಶೋಕ್‌ ಶೆಟ್ಟಿ ಕೆ., ಮಂಜುನಾಥ್‌ ಅಂಚನ್‌, ಜತೆ ಕೋಶಾಧಿಕಾರಿಗಳಾದ ವಸಂತ ಶೆಟ್ಟಿ, ಸದಾನಂದ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here