Home ಧಾರ್ಮಿಕ ಸುದ್ದಿ ಅಲೆವೂರು ಶ್ರೀ ವಿಷ್ಣುಮೂರ್ತಿದೇವಸ್ಥಾನ: ಧಾರ್ಮಿಕ ಕಾರ್ಯಕ್ರಮ

ಅಲೆವೂರು ಶ್ರೀ ವಿಷ್ಣುಮೂರ್ತಿದೇವಸ್ಥಾನ: ಧಾರ್ಮಿಕ ಕಾರ್ಯಕ್ರಮ

905
0
SHARE

ಕಟಪಾಡಿ: ಉಡುಪಿ ಮೂಡು ಅಲೆವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.15ರಂದು ಜರಗಲಿರುವ ಪಂಚವಿಂಶತಿ ದ್ರವ್ಯ ಮೀಳಿತ ಪಂಚಶತೀ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಮತ್ತು ಶೈವೋತ್ಸವ ರಂಗಪೂಜೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ತತ್ವಹೋಮ,

ಲಕ್ಷ್ಮೀನಾರಾಯಣ ಹೃದಯ ಹೋಮ, ಪುರುಷಸೂಕ್ತಹೋಮ, ಕಲಶ ಮಂಡಲ ರಚನೆ, ದಿಕಾ³ಲ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ವೇ|ಮೂ| ವಿದ್ವಾನ್‌ ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಜರಗಿತು.

ಈ ಸಂದರ್ಭ ಆಡಳಿತ ಮೊಕ್ತೇಸರ ವಾಮನ್‌ ಭಟ್‌, ಡಾ| ಸುದರ್ಶನ್‌ ಭಟ್‌ ಮತ್ತಿತರರು, ಕುಲದೇವತಾ ಬಂಧುಗಳು, ಗ್ರಾಮಸ್ಥರು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here