ಸುಳ್ಯ : ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದು, ಶನಿವಾರ ಗಣಪತಿ ಹವನ, ಉಷಾಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ, ಶ್ರೀ ಭೂತಬಲಿ, ಸೇವೆ ಸುತ್ತು, ಪಳ್ಳಿಬೇಟಿ (ಪೇಟೆ ಸವಾರಿ) ಸಿಡಿಮದ್ದು ಪ್ರದರ್ಶನ, ರಾತ್ರಿ ಪೂಜೆ, ಶಯನ, ಕವಾಟಬಂಧನ ನಡೆಯಿತು.
ರವಿವಾರ ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾ ಪೂಜೆ, ಆರಾಟು ಬಲಿ, ಅವಭೃಥ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಧ್ವಜ ಅವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಅಗ್ನಿಗುಳಿಗ ದೈವದ ಭಂಡಾರ ಬಂದು, ಭೂತಕೋಲ, ಬಟ್ಟಲುಕಾಣಿಕೆ ಕಾರ್ಯಕ್ರಮ ನಡೆದು ಜಾತ್ರೆ ಸಂಪನ್ನಗೊಂಡಿತು. ಸಾವಿರಾರು ಭಕ್ತಾಧಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಕಿರಣ್ ಕುಮಾರ್ ನಿರ್ದೇಶನದ ಗಾನಸಿರಿ ಪುತ್ತೂರು ಇದರ ಬೆಳ್ಳಾರೆ ಶಿಷ್ಯ ವೃಂದದವರಿಂದ ಭಕ್ತಿ-ಭಾವ-ಗಾನ ಮತ್ತು ಶೃಂಗೇರಿ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಇವರಿಂದ ಗೀತ ಗಾಯನ ನಡೆಯಿತು.
ಬೆಳ್ಳಾರೆ ಅಜಪಿಲ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಸದಸ್ಯರಾದ ಉದಯಕುಮಾರ್ ಕೆ.ಟಿ., ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ವಿಟ್ಠಲದಾಸ್ ಎನ್.ಎಸ್.ಡಿ., ಜಯರಾಮ ಉಮಿಕ್ಕಳ, ಜನಾರ್ದನ ಗೌರಿಹೊಳೆ, ನಾಗೇಶ್‌ಕುಲಾಲ್ ತಡಗಜೆ, ಗುಣವತಿ ಶೆಟ್ಟಿ ಮಂಡೇಪು, ಶಶಿಕಲಾ ರೈ ಚಾವಡಿಬಾಗಿಲು ಉಪಸ್ಥಿತರಿದ್ದರು.