Home ನಂಬಿಕೆ ಸುತ್ತಮುತ್ತ ಸುರಪಾನ, ಸಿಗರೇಟು, ವಿಸ್ಕಿ, ಬ್ರ್ಯಾಂಡಿಯೇ “ಈ ದೇವರುಗಳ” ನೈವೇಧ್ಯ!

ಸುರಪಾನ, ಸಿಗರೇಟು, ವಿಸ್ಕಿ, ಬ್ರ್ಯಾಂಡಿಯೇ “ಈ ದೇವರುಗಳ” ನೈವೇಧ್ಯ!

2481
0
SHARE

ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಜನರು ಆಚರಿಸುವ ಪೂಜೆಗಳೊಂದಿಗೆ ಸಮರ್ಪಣೆಯಾಗುವ ಚಿತ್ರ-ವಿಚಿತ್ರ ನೈವೇದ್ಯಗಳ ವಿವರ ಇಲ್ಲಿದೆ.

ಸುರಪಾನ ನೈವೇದ್ಯ!
ಬಾಗಲಕೋಟೆಯ ಈ ದೇವರಿಗೆ ಸಾರಾಯಿಯೇ ನೈವೇದ್ಯ. ಭಕ್ತರು ಸರಾಯಿ ತಂದು ದೇವರಿಗೆ ಸಮರ್ಪಣೆ ಮಾಡಿದರೆ ಆತ ಭಕ್ತರಿಗೆ ವರ ಕೊಡುತ್ತಾನೆ ಎಂಬ ವಿಚಿತ್ರ ನಂಬಿಕೆ ಈ ಊರಿನಲ್ಲಿದೆ.

ಈ ಆಚರಣೆ ನಡೆಯುವುದು ಬಾದಾಮಿ ತಾಲೂಕಿನ ಕೆಲವಡಿ ಗ್ರಾಮದಲ್ಲಿ. ಇಲ್ಲಿರುವ ರಂಗನಾಥ ಸ್ವಾಮಿಗೆ ಸಾರಾಯಿಯನ್ನು ಮಾತ್ರ ಪ್ರಮುಖ ನೈವೇದ್ಯವಾಗಿ ಪ್ರತಿ ವರ್ಷ ನಡೆಯುವ ಜಾತ್ರೆ ಸಮಯದಲ್ಲಿ ಅರ್ಪಿಸುತ್ತಾರೆ. ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತರು ಸಿಹಿ ತಿಂಡಿ, ಕಾಯಿ, ಹೂ, ಹಂಪಲು ಜೊತೆಗೆ ಸಾರಾಯಿಯನ್ನು ತರುತ್ತಾರೆ.

ಹಿಂದಿನ ಕಾಲದಲ್ಲಿ ರಂಗನಾಥ ಸ್ವಾಮಿ ಲಕ್ಷ್ಮಿಯೊಂದಿಗೆ ವಿಹಾರಕ್ಕಾಗಿ ಇಲ್ಲಿಗೆ ಬಂದು ಸೋಮರಸ ಸೇವಿಸುತ್ತಾ ಕಾಲ ಕಳೆಯುತ್ತಿದ್ದನಂತೆ. ಇದರ ಪ್ರತೀಕವಾಗಿ ಈಗಲೂ ಸಾರಾಯಿ ನೈವೇದ್ಯ ಮಾಡುವ ಪದ್ಧತಿ ಇದೆ ಎಂದು ಹೇಳಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ದೇವಾಲಯದಲ್ಲಿ ನೂರಾರು ವರ್ಷಗಳಿಂದ ಈ ಅಚರಣೆ ನಡೆಯುತ್ತದೆಯಂತೆ!
ಇನ್ನು ಧಾರವಾಡ ಇಂಗಳಗಿ ಗ್ರಾಮದ ಮರುಳ ಸಿದ್ದೇಶ್ವರ ದೇವರಿಗೆ ಸರಾಯಿಯಿಂದ ಪೂಜೆ ಮಾಡಿದರೆ ಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ಗ್ರಾಮದಲ್ಲಿ ಮರಳಸಿದ್ಧೇಶ್ವರ ಹಾಗೂ ನಿಜಲಿಂಗ ತಾಯಿ ಎಂಬ ದೇವತೆಗಳಿವೆ. ಈ ದೇವತೆಗಳ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಾದ ಅನಂತರದ ಮೊದಲ ಸೋಮವಾರದಂದು ನಡೆಯುತ್ತದೆ. ಜಾತ್ರೆ ನಿಮಿತ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಪೂಜಾ ಕಾರ್ಯಕ್ರಮ ಮುಗಿದ ಮೇಲೆ ತೆಂಗಿನಕಾಯಿ ಮುಖಾಂತರ ‘ಹೇಳಿಕೆ’ ನಡೆಯುತ್ತವೆ. ತೆಂಗಿನಕಾಯಿ ಒಡೆದಾಗ ಅದರ ಮುಂಭಾಗ ಆಕಾಶದ ಕಡೆ ಮುಖ ಮಾಡಿ ಬಿದ್ದಿದ್ದರೆ ಆತನಿಗೆ ವಿಘ್ನವಿಲ್ಲ. ವರ್ಷವಿಡೀ ಉತ್ತಮವಾದ ಜೀವನ ಸಾಗಿಸುತ್ತಾನೆ ಎಂದರ್ಥ. ಅದು ಅಕಸ್ಮಾತ್ ಭೂಮಿ ಕಡೆ ಮುಖ ಮಾಡಿ ಬಿದ್ದರೆ ಆತನಿಗೆ ತೊಂದರೆ, ವರ್ಷವಿಡೀ ವಿಘ್ನಗಳು ಬರುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ಇಲ್ಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಈ ಜಾತ್ರೆಯಲ್ಲಿ ಹಿಂದೂ-ಮುಸ್ಲಿಂ ಎರಡೂ ಜನಾಂಗದವರು ಸಾಮರಸ್ಯದಿಂದ ಅದ್ದೂರಿಯಾಗಿ ಜಾತ್ರೆ ಮಾಡುತ್ತಾರೆ.

LEAVE A REPLY

Please enter your comment!
Please enter your name here