Home ಧಾರ್ಮಿಕ ಕಾರ್ಯಕ್ರಮ ಶರವೂರು: ಬಲಿವಾಡು ಕೂಟ, ದೊಡ್ಡ ರಂಗಪೂಜೆ

ಶರವೂರು: ಬಲಿವಾಡು ಕೂಟ, ದೊಡ್ಡ ರಂಗಪೂಜೆ

766
0
SHARE

ಆಲಂಕಾರು: ಸೀಮಾ ದೇವಸ್ಥಾನವಾದ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಲಿವಾಡು ಕೂಟ ಮತ್ತು ದೊಡ್ಡರಂಗ ಪೂಜೆ ಪತ್ತನಾಜೆಯ ಪ್ರಯುಕ್ತ ಇತ್ತೀಚೆಗೆ ನಡೆಯಿತು.

ಬೆಳಗ್ಗೆ ಎಂದಿನಂತೆ ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ ಬಲಿವಾಡು ಕೂಟ ನಡೆದ ಬಳಿಕ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ದೊಡ್ಡರಂಗ ಪೂಜೆ, ಬಲಿ ಹೊರಟು ಉತ್ಸವ ನಡೆದು ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಂ. ಕಮಲಾಕ್ಷ ರೈ ಪರಾರಿ ಗುತ್ತು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರಿಪ್ರಸಾದ್‌ ಉಪಾಧ್ಯಾಯ ಶರವೂರು, ಕರಿಯ ಗಾಣಂತಿ ಆಲಂಕಾರು, ಗುರುಪ್ರಸಾದ್‌ ರೈ ಕೇವಳ ಕುಂತೂರು, ಉಮೇಶ ದೇವಾಡಿಗ ನಾಡ್ತಿಲ, ಆನಂದ ಪೂಜಾರಿ ಅಗತ್ತಾಡಿ ಗುತ್ತು, ಶೀವಪ್ಪ ಗೌಡ ಶೇಡಿ ಮನೆ ಕುಂತೂರು, ಮೀನಾಕ್ಷೀ ಹರೀಶ ಪೂಜಾರಿ ಸಾಂತ್ಯ ಹಳೆನೇರೆಂಕಿ, ಅಮೃತಾ ಜಯಪ್ರಕಾಶ್‌ ರೈ ಪೆರಾಬೆ ಪಟ್ಟೆ, ಹಾಗೂ ಊರ ಪರವೂರ ಭಕ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here