ತಲಪಾಡಿ : ಇಲ್ಲಿನ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪ್ರಧಾನ ದೈವಗಳಾಗಿ ಆರಾಧನೆಗೊಳ್ಳುತ್ತಿರುವ ತಲಪಾಡಿ ಅಲಂಕಾರಗುಡ್ಡೆಯ ಶ್ರೀ ಮಲರಾಯ, ಧೂಮಾವತೀ ಬಂಟ ದೈವಸ್ಥಾನದಲ್ಲಿ ರವಿ ವಾ ರ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಿತು.
ಕ್ಷೇತ್ರದ ಶ್ರೀ ನಾಗದೇವರು ಮತ್ತು ಶ್ರೀ ಮಲರಾಯ, ಧೂಮಾವತೀ ಹಾಗೂ ಬಂಟ ದೈವಗಳ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಸತ್ಕರ್ಮಗಳು ಬ್ರಹ್ಮಶ್ರೀ ವರ್ಕಾಡಿ ಶ್ರೀ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ತಲಪಾಡಿ ಪಂಜಾಳ ಶ್ರೀ ಬಾಲಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ರವೀಂದ್ರನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಜಯಪಾಲ ಶೆಟ್ಟಿ, ಗೌರವಾಧ್ಯಕ್ಷ ಸುಬ್ಬಯ ಮಾರ್ಲ ಉಳಿಪಾಡಿಗುತ್ತು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನ್ಯಾಯವಾದಿ, ಸಾಂತ್ಯ ಗಡದಗುತ್ತು ಬಿ. ರವೀಂದ್ರನಾಥ ರೈ, ಗೌರವಾಧ್ಯಕ್ಷ ಕೆ.ಸಿ. ಆಳ್ವ ನೆತ್ತಿಲಬಾಳಿಕೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಂತ ಪೂಜಾರಿ, ಸಚ್ಚಿದಾನಂದ ಶೆಟ್ಟಿ ಹೊಸಮನೆಬಾವ, ಗಣೇಶ್ ಶೆಟ್ಟಿ ತಲಪಾಡಿ, ಪ್ರಶಾಂತ ಚೌಟ ಪಂಜಿಮುಂಡೇಲು, ಶೇಖರ ಶೆಟ್ಟಿ ಶೆಟ್ಟಿಪಾಲುಗುತ್ತು, ಕೃಷ್ಣಪ್ಪ ಮಾಧವಪುರ, ನಯನ ಮಾಧವ ತಲಪಾಡಿ, ಸೌದಾಮಿನಿ ತಲಪಾಡಿ, ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಮೋಹನದಾಸ ಗಾಂಭೀರ, ವಿನಯ ನಾೖಕ್ ತಲಪಾಡಿ, ಭಾಸ್ಕರ ಶೆಟ್ಟಿ ನಾರ್ಲ, ಸುಧೀರ್ ಶೆಟ್ಟಿ ಕಣ್ಣೂರು, ಪ್ರದೀಪ್ ಕಿಲ್ಲೆ ಮೇಗಿನ ಪಂಜಾಳಗುತ್ತು, ಉದಯ ಕುಮಾರ್ ಶೆಟ್ಟಿ ನಾರ್ಲ, ಧರ್ಮಪಾಲ ಭಂಡಾರಿ ದೇವಿಪುರ, ಸೀತಾರಾಮ ರೈ ಹೊಸಮನೆ ಬಾವ, ಮಾಧವನ್ ತಲಪಾಡಿ, ಸುನಿತ್ ಮರೋಳಿ ತಲಪಾಡಿ, ಸಂತೋಷ್ ಕುಮಾರ್ ಭಂಡಾರಮನೆ, ಚಂದ್ರಹಾಸ ಪಿಲಿಕೂರು, ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷರುಗಳಾದ ಪದ್ಮನಾಭ ಶೆಟ್ಟಿ ತಲಪಾಡಿ ಗುತ್ತು, ಟಿ. ರಾಮಯ್ಯ ಕಿಲ್ಲೆ ಮೇಗಿನಪಂಜಾಳಗುತ್ತು, ಸಚ್ಚದಾನಂದ ಭಂಡಾರಿ ಪಂಜಾಳ, ಜಯರಾಮ ಶೆಟ್ಟಿ ಕಡೆಮುಗೇರುಗುತ್ತು, ಶೋಭಾ ಎಸ್. ಶೆಟ್ಟಿ ಶೆಟ್ಟಿಪಾಲುಗುತ್ತು, ಕಾರ್ಯ ದರ್ಶಿಗಳಾದ ಮಹೇಶ್ ಪ್ರಸಾದ್ ಬಿ. ಅಲಂಕಾರಗುಡ್ಡೆ, ಸದಾಶಿವ ದೇರುಬೈದರಪಾಲು ಸೇರಿದಂತೆ ವಿವಿಧ ಉಪ ಸಮಿತಿಯ ಪ್ರಧಾನ ಸಂಚಾಲಕರು, ಸಂಚಾಲಕರು, ಪದಾಧಿಕಾರಿಗಳು ಸೇರಿದಂತೆ ಶ್ರೀ ದೈವಗಳ ಪಾತ್ರಿಗಳು, ಸೇವಾವರ್ಗ, ಹದಿನಾರು ಮನೆತನದವರು, ಭಂಡಾರ ಮನೆ ಕುಟುಂಬಸ್ಥರು ಭಕ್ತಾದಿಗಳು ಭಾಗವಹಿಸಿದ್ದರು.
ಬ್ರಹ್ಮಕಲಶಾಭಿಷೇಕ
ಪ್ರಾತಃಕಾಲ ಸ್ವಸ್ತಿ ಪುಣ್ಯಾಹ, ಗಣಯಾಗ, ಪ್ರತಿಷ್ಠಾ ಹೋಮ, ದುರ್ಗಾ ಹೋಮ, ಬ್ರಹ್ಮಕಲಶ ಪೂಜೆ, ನೂತನ ಆಲಯದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ನಡಾವಳಿ ನಿರ್ಣಯ, ದೈವಗಳಿಗೆ ಪಂಚಗವ್ಯ, ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು. ದುರ್ಗಾಹೋಮ ದ ಪೂರ್ಣಾಹುತಿ ಬಳಿಕ ದೈವಗಳಿಗೆ ಪರ್ವ, ತಂಬಿಲ ಸೇವೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.