ಅಜೆಕಾರು: ಹಿರ್ಗಾನ ಗ್ರಾಮದ ಹಾಡಿ ಶ್ರೀ ಮಾಯಂದಾಲೆ ದೇವಿ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ ವರ್ಷಾವಧಿ ಜಾತ್ರೆಯು ಆ. 17ರಂದು ಪ್ರಾರಂಭಗೊಂಡಿತು.
ಆ. 17ರ ಸಿಂಹ ಸಂಕ್ರಮಣ ಪೂಜೆ ಯೊಂದಿಗೆ ಪ್ರಾರಂಭಗೊಂಡ ವರ್ಷಾವಧಿ ಜಾತ್ರೆಯು ಆ. 21ರ ವರೆಗೆ ನಡೆಯಲಿದೆ.
ಪ್ರತೀ ವರ್ಷ ಸಿಂಹ ಸಂಕ್ರಮಣದಂದು ಇಲ್ಲಿನ ವರ್ಷಾವಧಿ ಜಾತ್ರೆಯು ಪ್ರಾರಂಭ ಗೊಳ್ಳುತ್ತದೆ. ಪತ್ತನಾಜೆಯ ನಂತರ ತುಳುನಾಡಿನಲ್ಲಿ ನಡೆಯುವ ಪ್ರಪ್ರಥಮ ವರ್ಷಾವಧಿ ಜಾತ್ರೆ ಹಾಗೂ ನೇಮ ಹಾಡಿ ಗರಡಿಯದ್ದಾಗಿದೆ.
ಆ. 17ರಂದು ಬೆಳಗ್ಗೆ ತೋರಣ ಮುಹೂರ್ತ ನಡೆದು ಪಂಚ ದೈವಗಳ ಸನ್ನಿಧಾನದಲ್ಲಿ ತನುತಂಬಿಲ ನೆರವೇರಿತು. ಮಧ್ಯಾಹ್ನ ಅಲಂಕಾರ ಪೂಜೆ ನಡೆದು ಶ್ರೀ ಬ್ರಹ್ಮಬಲಿ ನೆರವೇರಿತು.
ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ, ಕಾರ್ಯದರ್ಶಿ ಕೌಸ್ತಭ ಸತೀಶ್ ಪೂಜಾರಿ, ಕೋಶಾಧಿಕಾರಿ ಸತೀಶ್ ಬಿದಿರುಮಾರು, ಗರಡಿ ಪೂಜಾರಿ ಕೃಷ್ಣಪ್ಪ ಪೂಜಾರಿ, ಸಂಜೀವ ಪೂಜಾರಿ, ಸದಸ್ಯರಾದ ಪ್ರದೀಪ್ ಕಾನಂಗಿ, ಶ್ರೀಕಾಂತ್ ಭಟ್, ಸಂಜೀವ ಪೂಜಾರಿ ಚಿಕ್ಕಲಬೆಟ್ಟು, ಶಿವರಾಮ್ ಪೂಜಾರಿ, ಭೋಜ ಪೂಜಾರಿ, ನವೀನ್ ಪೂಜಾರಿ ಉಪಸ್ಥಿತರಿದ್ದರು.