Home ಧಾರ್ಮಿಕ ಸುದ್ದಿ ಹಿರ್ಗಾನದಲ್ಲಿ ಕವಳೆ ಶ್ರೀಗಳ ಸನ್ಯಾಸ ದೀಕ್ಷೆಯ ಬೆಳ್ಳಿಹಬ್ಬ

ಹಿರ್ಗಾನದಲ್ಲಿ ಕವಳೆ ಶ್ರೀಗಳ ಸನ್ಯಾಸ ದೀಕ್ಷೆಯ ಬೆಳ್ಳಿಹಬ್ಬ

956
0
SHARE

ಅಜೆಕಾರು : ಗೋವಾ ಕವಳೇ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀ ಮಹಾರಜ್‌ ಅವರ ಸನ್ಯಾಸ ದೀಕ್ಷೆಯ ಬೆಳ್ಳಿಹಬ್ಬ ಸಮಾರಂಭವು ನ. 26ರಂದು ಹಿರ್ಗಾನ ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಲಿದೆ.

ಈ ಸಂದರ್ಭ ಸ್ವಾಮೀಜಿಯವರು ಶಿಷ್ಯ ವೃಂದವನ್ನು ಆಶೀರ್ವದಿಸಲಿದ್ದಾರೆ. ವಿಶೇಷ ಧಾರ್ಮಿಕ ಅನುಷ್ಠಾನ, ಭಿಕ್ಷಾ ಸೇವೆ, ಪಾದಪೂಜೆ ಹಾಗೂ ಸಂತರ್ಪಣೆ ನಡೆಯಲಿದೆ.

ನ. 24ರಂದು ದೇವಸ್ಥಾನದ ನೂತನ ಸಭಾಭವನ ಶಿವಾನಂದ ಸರಸ್ವತೀ ಸಭಾಭವನವನ್ನು ಶ್ರೀಗಳು ಉದ್ಘಾಟಿಸುವರು. ಅದೇ ಸಂದರ್ಭ ದಾನಿಗಳು ಹಾಗೂ ಕರಸೇವಕರಿಗೆ ಅಭಿನಂದನೆ ನೆರವೇರಲಿದೆ.

LEAVE A REPLY

Please enter your comment!
Please enter your name here