Home ಧಾರ್ಮಿಕ ಸುದ್ದಿ ಮುನಿಯಾಲು ಲಕ್ಷ್ಮೀ ವೆಂಕಟರಮಣ ದೇಗುಲ: ಲಕ್ಷದೀಪೋತ್ಸವ

ಮುನಿಯಾಲು ಲಕ್ಷ್ಮೀ ವೆಂಕಟರಮಣ ದೇಗುಲ: ಲಕ್ಷದೀಪೋತ್ಸವ

749
0
SHARE

ಅಜೆಕಾರು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮುನಿಯಾಲು ಇದರ ಕಾರ್ತಿಕ ಲಕ್ಷ ದೀಪೋತ್ಸವವು ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯ ಕಟ್ಟೆ ಪೂಜೆ ಅಭಿಷೇಕ, ಭೂರಿ ಸಮಾರಾಧನೆ ನೆರವೇರಿತು.

ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ, ನ.15ರ ರಾತ್ರಿ ನಡೆಯಿತು. ಅನಂತರ ವಿವಿಧ ಧಾರ್ಮಿಕ ಕಾರ್ಯ ನಡೆದು ನಗರೋತ್ಸವ ನೆರವೇರಿತು. ನ.16ರ ಬೆಳಗ್ಗೆ ಅವಭೃಥ ಸ್ಥಾನ ದೊಂದಿಗೆ ದೀಪೋತ್ಸವ ಸಂಪನ್ನಗೊಂಡಿತು. ಈ ಸಂದರ್ಭ ದೀಪಗಳಿಂದ ದೇವಸ್ಥಾನ ಅಲಂಕರಿಸಿ ದೇವರ ಪಲ್ಲಕ್ಕಿ ಉತ್ಸವ ನೆರವೇರಿತು. ಆಡಳಿತ ಮೊಕ್ತೇಸರ ಶ್ರೀಧರ ಪೈ ಹಾಗೂ ಮೊಕ್ತೇಸರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here