Home ಧಾರ್ಮಿಕ ಕಾರ್ಯಕ್ರಮ ಅಜಪಿಲ ಜಾತ್ರೆ: ಶ್ರೀ ದೇವರ ಪೇಟೆ ಸವಾರಿ

ಅಜಪಿಲ ಜಾತ್ರೆ: ಶ್ರೀ ದೇವರ ಪೇಟೆ ಸವಾರಿ

483
0
SHARE
ಬೆಳ್ಳಾರೆಯಲ್ಲಿ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ನಡೆಯಿತು.

ಸುಳ್ಯ: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆ, ದರ್ಶನ ಬಲಿ, ಪೇಟೆ ಸವಾರಿ ಕ್ಷೇತ್ರದ ತಂತ್ರಿ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು.

ಉಗ್ರಾಣ ಮುಹೂರ್ತ, ತಂತ್ರಿಗಳ ಆಗಮನ ಸ್ವಾಗತ, ಪ್ರಾರ್ಥನೆ, ದೀಪಾರಾಧನೆ, ರಾತ್ರಿ ಧ್ವಜಾರೋಹಣ, ಬಯನ ಬಲಿ, ರಾತ್ರಿ ಪೂಜೆ, ದರ್ಶನ ಬಲಿ, ಉಷಾಃಪೂಜೆ, ಶಿವೇಲಿ, ನವಕ, ಕಲಶಾಭಿಷೇಕ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಾಲ್ಕು ದಿನಗಳ ಕಾಲ ನಡೆದವು.

ವೈಭವದ ಪೇಟೆ ಸವಾರಿ
ಗುರುವಾರ ಬೆಳಗ್ಗೆ ಗಣಪತಿ ಹವನ, ಉಷಾಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಹಾಪೂಜೆ, ಶಿವೇಲಿ, ಅನ್ನಪ್ರಸಾದ ಸಮರ್ಪನೆ ನಡೆಯಿತು. ಸಂಜೆ ಶ್ರೀ ಭೂತ ಬಲಿ, ಸೇವೆ ಸುತ್ತು ನಡೆದು ಅನಂತರ ದೇವಾಲಯದಿಂದ ಬೆಳ್ಳಾರೆ ಮುಖ್ಯ ರಸ್ತೆಯಾಗಿ ಮಾಸ್ತಿಪೇಟೆ ತನಕ ಅಲ್ಲಲ್ಲಿ ಕಟ್ಟೆಪೂಜೆ ನಡೆದು, ವೈಭವದ ಪೇಟೆ ಸವಾರಿ ನಡೆಯಿತು. ಸುಡುಮದ್ದು ಪ್ರದರ್ಶನ ನಡೆದು, ಶಯನ, ಕವಾಟ ಬಂಧನ ನಡೆಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್‌ ರೈ ಪುಡ್ಕಜೆ, ಪ್ರಧಾನ ಅರ್ಚಕ ಉದಯ ಕುಮಾರ್‌ ಕೆ.ಟಿ., ಸದಸ್ಯರಾದ ವಿಟ್ಠಲದಾಸ್‌ ಎನ್‌ಎಸ್‌ಡಿ, ಜಯರಾಮ ಉಮ್ಮಿಕ್ಕಳ, ಜನಾರ್ದನ ಗೌರಿಹೊಳೆ, ನಾಗೇಶ್‌ ಕುಲಾಲ್‌ ತಡಗಜೆ, ಗುಣವತಿ ಶೆಟ್ಟಿ ಮಂಡೇಪು, ಶಶಿಕಲಾ ರೈ ಚಾವಡಿಬಾಗಿಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here