Home ಧಾರ್ಮಿಕ ಸುದ್ದಿ ಅಜಪಿಲ ದೇಗುಲ: ಜಾತ್ರೆಗೆ ಚಾಲನೆ

ಅಜಪಿಲ ದೇಗುಲ: ಜಾತ್ರೆಗೆ ಚಾಲನೆ

769
0
SHARE

ಬೆಳ್ಳಾರೆ : ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ಪ್ರಾರಂಭಗೊಂಡಿದ್ದು, ಬುಧವಾರ ರಾತ್ರಿ ಧ್ವಜಾರೋಹಣ, ರಾತ್ರಿ ಪೂಜೆ, ದರ್ಶನ ಬಲಿ ನಡೆಯಿತು.

ಬ್ರಹ್ಮಶ್ರೀ ವೇ| ಮೂ| ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಫೆ. 13ರಂದು ಬೆಳಗ್ಗೆ ಉಗ್ರಾಣ ಮುಹೂರ್ತ,
ಸಂಜೆ ತಂತ್ರಿಗಳ ಆಗಮನ, ಫೆ. 14ರಂದು ಬೆಳಗ್ಗೆ ಗಣಪತಿ ಹವನ, ಉಷಾಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ, ರಾತ್ರಿ
ಶಿವೇಲಿ, ನೃತ್ಯ ಬಲಿ, ಅನಂತರ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಕಿರಣ್‌ ಕುಮಾರ್‌ ನಿರ್ದೇಶನದ ಗಾನಸಿರಿ ಪುತ್ತೂರು ಇದರ ಬೆಳ್ಳಾರೆ ಶಿಷ್ಯ ವೃಂದದಿಂದ
ಭಕ್ತಿ-ಭಾವ-ಗಾನ ಕಾರ್ಯಕ್ರಮ ನಡೆಯಿತು.

ಇಂದಿನ ಕಾರ್ಯಕ್ರಮ ಫೆ. 15ರಂದು ಬೆಳಗ್ಗೆ ಗಣಪತಿ ಹವನ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ರಾತ್ರಿ ಪೂಜೆ, ನೃತ್ಯಬಲಿ, ಸಂಜೆ ಗೀತಾ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here