ಬೆಳ್ಳಾರೆ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ವಾರ್ಷಿಕ ಜಾತ್ರೆ ಫೆ. 13 ರಿಂದ ಫೆ. 17ರ ತನಕ ನಡೆಯಲಿದ್ದು, ಗೊನೆ ಮುಹೂರ್ತ ಶನಿವಾರ ನಡೆಯಿತು.
ಕ್ಷೇತ್ರದ ಅರ್ಚಕ ಉದಯಕುಮಾರ ಕೆ.ಟಿ. ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನೀಲ್ ರೈ ಪುಡ್ಕಜೆ, ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆ ಗುತ್ತು, ವಿಟuಲದಾಸ್ ಎನ್.ಎಸ್.ಡಿ., ಜಯರಾಮ ಉಮಿಕ್ಕಳ, ಜನಾರ್ದನ, ನಾಗೇಶ್ ಕುಲಾಲ್ ತಡಗಜೆ, ಗುಣವತಿ ಶೆಟ್ಟಿ ಮಂಡೆಪು, ಶಶಿಕಲಾ ರೈ ಚಾವಡಿಬಾಗಿಲು ಹಾಗೂ ಭಕ್ತರು ಉಪಸ್ಥಿತರಿದ್ದರು.