Home ಧಾರ್ಮಿಕ ಸುದ್ದಿ ಅಗ್ರಹಾರ : ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ಮನ್ಮಹಾರಥೋತ್ಸವ ಸಂಪನ್ನ

ಅಗ್ರಹಾರ : ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ಮನ್ಮಹಾರಥೋತ್ಸವ ಸಂಪನ್ನ

1545
0
SHARE

ಕಟಪಾಡಿ: ಏಣಗುಡ್ಡೆ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಶ್ರೀ ಮನ್ಮಹಾರಥೋತ್ಸವವು ಗುರುವಾರ ಸಂಪನ್ನಗೊಂಡಿತು.

ಆ ಪ್ರಯುಕ್ತ ವೇ|ಮೂ| ಪಾಡಿಗಾರು ಶ್ರೀ ವಾಸುದೇವ ತಂತ್ರಿ, ವೇ|ಮೂ| ವೈ. ವಾದಿರಾಜ ಭಟ್‌ ಮತ್ತು ದೇವಸ್ಥಾನದ ಅರ್ಚಕರು ನೇತೃತ್ವದಲ್ಲಿ ಪೂರ್ವಾಹ್ನ ಪ್ರಧಾನ ಯಾಗ, ಕಲಶಾಭಿಷೇಕ, ಮಹಾಪೂಜೆ, ರಥಶುದ್ಧಿ, ಮಧ್ಯಾಹ್ನ ರಥಾರೋಹಣ ನಡೆದು ನೂರಾರು ಭಕ್ತಾಧಿಗಳು ಮಹಾ ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು. ರಾತ್ರಿ ಮಹಾರ ಥೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಆಡಳಿತ ಮೊಕ್ತೇಸರರಾದ ಏಣಗುಡ್ಡೆ ಹೊಸಮನೆ ವೈ. ಭರತ್‌ ಹೆಗ್ಡೆ, ಮೊಕ್ತೇಸರರಾದ ವೈ. ಆರ್‌. ಹೆಗ್ಡೆ, ಲೀಲಾ ಎನ್‌. ಶೆಟ್ಟಿ, ಪುಷ್ಪಲತಾ ಆರ್‌. ಭಟ್‌, ಚಂದ್ರಶೇಖರ ಅಂಚನ್‌,
ಗಿರೀಶ್‌ ಎಂ.ಅಂಚನ್‌, ನಾರಾಯಣ ಪೂಜಾರಿ, ವೈ. ಅಶೋಕ್‌, ಸಿಬಂದಿ ವರ್ಗ, ಊರ ಹತ್ತು ಸಮಸ್ತರು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಇಂದು ತುಲಾಭಾರಾಧಿ ಸೇವೆ ಫೆ.22ರಂದು ಧಾರ್ಮಿಕ ಕಾರ್ಯ ಕ್ರಮದಂಗವಾಗಿ ಬೆಳಿಗ್ಗೆ 7:15ರ ಕುಂಭಲಗ್ನದಲ್ಲಿ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ತುಲಾಭಾರ ಸೇವೆಗಳು, ರಾತ್ರಿ 6-00ಕ್ಕೆ ಕಟ್ಟೆಪೂಜೆ, ಅವಭೃತ, ಕಲ್ಕುಡ ಕೋಲ, ಪೂರ್ಣಾಹುತಿ, ರಾತ್ರಿ ಪೂಜೆ, ಧ್ವಜಾವರೋಹಣ ನೆರವೇರಲಿದೆ

LEAVE A REPLY

Please enter your comment!
Please enter your name here