Home ಧಾರ್ಮಿಕ ಸುದ್ದಿ ಅಡ್ಯರಗೋಳಿ: ದೈವಗಳ ನೇಮ

ಅಡ್ಯರಗೋಳಿ: ದೈವಗಳ ನೇಮ

1838
0
SHARE

ಕಬಕ : ಅಡ್ಯರಗೋಳಿ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ನೇಮ ಮತ್ತು ಶ್ರೀ ನಾಗ ದರ್ಶನ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಡಿ. 28ರಂದು ಕಬಕ ದೈವದ ಸನ್ನಿಧಿಯಲ್ಲಿ ನಡೆಯಿತು.

ವೇ|ಮೂ| ಮಿತ್ತೂರು ಸದಾಶಿವ ಭಟ್‌ ಮತ್ತು ಶ್ರೀಧರ ಭಟ್‌ ಅವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಡಿ. 28ರಂದು ಪ್ರಾರ್ಥನೆ, ಮಹಾಗಣಪತಿ ಹವನ, ಶುದ್ಧಿ ಕಲಶ, ನಾಗ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸಂಜೆ ವೇ| ಮೂ| ರಾಮಚಂದ್ರ ಕುಂಜಿತ್ತಾಯ ಅವ ರಿಂದ ನಾಗ ದರ್ಶನ, ಅನಂತರ ದೈವಗಳ ಭಂಡಾರ ತೆಗೆದು ಕಬಕ ಮಹಾದೇವಿ ದೇವ ಸ್ಥಾನಕ್ಕೆ ಮೆರವಣಿಗೆ, ರಾತ್ರಿ ಅಡ್ಯಲಾಯ ವೈದ್ಯನಾಥ, ಅಣ್ಣಪ್ಪ ಮತ್ತು ಪಂಜುರ್ಲಿ, ವ್ಯಾಘ್ರ ಚಾಮುಂಡಿ ಮತ್ತು ಧೂಮಾವತಿ ದೈವಗಳ ನೇಮ ವಿಜ್ರಂಭಣೆಯಿಂದ ನಡೆಯಿತು.

LEAVE A REPLY

Please enter your comment!
Please enter your name here