Home ಧಾರ್ಮಿಕ ಕಾರ್ಯಕ್ರಮ ಶ್ರೀ ಕ್ಷೇತ್ರ ಅಡಪಾಡಿ: ನೂತನ ಪೌಳಿ, ಶಿಲಾಮಯ ವಸಂತ ಮಂಟಪ ಸಮರ್ಪಣೆ

ಶ್ರೀ ಕ್ಷೇತ್ರ ಅಡಪಾಡಿ: ನೂತನ ಪೌಳಿ, ಶಿಲಾಮಯ ವಸಂತ ಮಂಟಪ ಸಮರ್ಪಣೆ

1154
0
SHARE

ಬೆಳ್ಮಣ್‌: ಅಡಪಾಡಿ ಶ್ರೀ ದುರ್ಗಾಪರಮೇಶ್ವರೀ, ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಮಂಗಳವಾರ ನಡೆಯಿತು.

ಧರ್ಮದರ್ಶಿ ಪುಂಡಲೀಕ ನಾಯಕ್‌ ಉಪಸ್ಥಿತಿಯಲ್ಲಿ ತಂತ್ರಿಗಳಾದ ವೇ|ಮೂ| ಮೃಗೇಶ್‌ ಭಟ್‌ ಲಕ್ಷ್ಮೀಪುರ, ವೇ|ಮೂ| ದಯಾನಂದ ಭಟ್‌ ಕಲ್ಲಡ್ಕ ಇವರ ನೇತೃತ್ವ ಹಾಗೂ ಕ್ಷೇತ್ರದ ಅರ್ಚಕರ ಸಹಭಾಗಿತ್ವದಲ್ಲಿ ಧಾರ್ಮಿಕ ಅನುಷ್ಠಾನಗಳು, ನವಕ ಪ್ರಧಾನಹೋಮ, ಲಘುರುದ್ರ ಅಭಿಷೇಕ, ನವಕ ಕಲಶಾಭಿಷೇಕ, ಲಘುರುದ್ರಯಾಗ, ಮಹಾಪೂಜೆ ನಡೆಯಿತು.

ದೇಗುಲದ ದಕ್ಷಿಣಭಾಗದ ಪೌಳಿ ಹಾಗೂ ಶಿಲಾಮಯ ವಸಂತ ಮಂಟಪದ ಲೋಕಾರ್ಪಣೆ, ರಜತ ಪಲ್ಲಕಿ ಉತ್ಸವ, ದರ್ಶನಸೇವೆ, ಮಹಾ ಅನ್ನಸಂತರ್ಪಣೆ, ಸಂಜೆ ಕಲ್ಪೋಕ್ತ ಪೂಜೆ, ಮಹಾರಂಗಪೂಜೆ, ಮಹಾ ಬಲಿ ಉತ್ಸವ, ಧರ್ಮದೈವಗಳ ನೇಮ ಸಂಪನ್ನಗೊಂಡವು.

ಈ ಸಂದರ್ಭ ಭಕ್ತರೋರ್ವರಿಂದ ಸೇವಾರೂಪದಲ್ಲಿ ‘ಶ್ರೀ ಕ್ಷೇತ್ರ ಅಡಪಾಡಿ – ಕ್ಷೇತ್ರದರ್ಶನ’ ಸಿಡಿ ಸಮರ್ಪಣೆ ಹಾಗೂ ಬಿಡುಗಡೆ ಮಾಡಲಾಯಿತು.

LEAVE A REPLY

Please enter your comment!
Please enter your name here