ಮಹಾನಗರ: ಅಡುಮರೋಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ 33ನೇ ಪ್ರತಿಷ್ಠಾ ವರ್ಧಂತಿಯ ಸಲುವಾಗಿ ಸಾಮೂಹಿಕ ಚಂಡಿಕಾಯಾಗ ನಡೆಯಿತು.
ಇದೇ ಸಂದರ್ಭದಲ್ಲಿ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಆಡಳಿತ ಸಮಿತಿಯ ಅಧ್ಯಕ್ಷ ಎಂ.ನಾಗೇಶ್ ಸುವರ್ಣ ನಟ್ಟಿಮನೆ, ಕಾರ್ಯದರ್ಶಿ ಶೇಖರ್ ಅಮೀನ್ ಪಾಂಪುಮನೆ, ಆನುವಂಶಿಕ ಆಡಳಿತ ಮೊಕ್ತೇಸರರಾದ ಚಂದ್ರಹಾಸ್ ಬಿ. ಪಾಂಪುಮನೆ, ಎಂ. ಕಮಲಾಕ್ಷ ಸುವರ್ಣ ನಟ್ಟಿಮನೆ, ಎಂ. ಜಗನ್ನಾಥ ದೊಡ್ಡಮನೆ ಹಾಗೂ ಗ್ರಾಮಸ್ಥರು ಸಹಿತ ಮೊದಲಾದವರು ಉಪಸ್ಥಿತರಿದ್ದರು.