ಜಾಲ್ಸೂರು : ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಫೆ. 25, 26, 27ರಂದು ನಡೆಯುವ ವರ್ಷಾವಧಿ ಜಾತ್ರೆ ಹಾಗೂ ಗುಳಿಗರಾಜನಿಗೆ ನೇಮ ಸಮರ್ಪಣೆ, ಆಂಜನೇಯ ನೇಮ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ತಂತ್ರಿ ಪುರೋಹಿತ ನಾಗರಾಜ ಭಟ್, ಆಡಳಿತ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಶಿವರಾಮ ರೈ ಕುರಿಯಗುತ್ತು, ಖಜಾಂಚಿ ಜಯಂತ ಗೌಡ ಅಡ್ಕಾರು, ಆಡಳಿತ ಧರ್ಮದರ್ಶಿ ಸಮಿತಿ ಸದಸ್ಯರಾದ ಗಣೇಶ್ ಭಟ್ ಸಂಪತ್ತಿಲ, ರವಿಪ್ರಸಾದ್ ನಾಯಕ್ ಕಜೆಗದ್ದೆ, ಕೃಷ್ಣಕುಮಾರ್, ರವಿಚಂದ್ರ ಅಡ್ಕಾರು, ನಾರಾಯಣ ನಾಯ್ಕ ಅಡ್ಕಾರು, ಸೇವಾ ಸಮಿತಿ ಸದಸ್ಯ ಸೀತಾರಾಮ ಗೌಡ ಆಳಂಕಲ್ಯ, ರಾಘವ ಅಡ್ಕಾರು, ಮಹಿಳಾ ಸಮಿತಿ ಅಧ್ಯಕ್ಷೆ ತಿರುಮಲೇಶ್ವರಿ ಅರ್ಭಡ್ಕ ಉಪಸ್ಥಿತರಿದ್ದರು.