Home ಧಾರ್ಮಿಕ ಸುದ್ದಿ ‘ಆಧ್ಯಾತ್ಮಿಕ ಮನೋಗುಣದಿಂದ ಸಾಧನೆ’

‘ಆಧ್ಯಾತ್ಮಿಕ ಮನೋಗುಣದಿಂದ ಸಾಧನೆ’

ದಿವ್ಯ ಚೇತನ ಸಂಘ: ಪಾಲಕರ ದಿನಾಚರಣೆ

1835
0
SHARE

ದರ್ಬೆ: ಜೀವನದ ವಿವಿಧ ಆಯಾಮಗಳಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳುವ ಮನೋಗುಣವನ್ನು ಹೊಂದಿದಾಗ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಜುಡಿಶಿಯಲ್‌ ವಿಕಾರ್‌ ವಂ| ವಾಲ್ಟರ್‌ ಡಿ’ಮೆಲ್ಲೊ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಶನಿವಾರ ಕಾಲೇಜಿನ ದಿವ್ಯ ಚೇತನ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಪಾಲಕರ ದಿನಾಚರಣೆಯಲ್ಲಿ ಬಲಿ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಪ್ರವಚನ ನೀಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಮಾನವನ ಜೀವನ ಶೈಲಿಯೇ ಬದಲಾಗಿದೆ. ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ತಾಂತ್ರಿಕತೆ ಆವರಿಸಿಕೊಂಡಿದೆ. ಪ್ರತಿಯೊಂದು ಕ್ಷಣವೂ ಜ್ಞಾನ, ಕೌಶಲ ಮತ್ತು ಸಂಪತ್ತು ಗಳಿಕೆಯಲ್ಲೇ ತಲ್ಲೀನವಾಗಿರುವುದರಿಂದ ಆಧ್ಯಾತ್ಮಿಕ ಚಿಂತನೆ ಕ್ಷೀಣಿಸಿದಂತೆ ಭಾಸವಾಗುತ್ತದೆ. ಫಿಲೋಮಾತೆ ಸಮಾಜದಲ್ಲಿ ಪರಸ್ಪರ ಪ್ರೀತಿ, ಪ್ರಾಮಾಣಿಕತೆ, ಶಾಂತಿ ಸೌಹಾರ್ದ ಮತ್ತು ಮಾನವೀಯ ಸಂಬಂಧಗಳು ಉತ್ತಮವಾಗಿ ಬೆಳೆಯುವಂತೆ ಅನುಗ್ರಹಿಸಲಿ ಎಂದು ಹೇಳಿದರು.

ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೋ, ಮರೀಲ್‌ ಚರ್ಚ್‌ ಧರ್ಮಗುರು ವಂ| ವಲೇರಿಯನ್‌ ಫ್ರಾಂಕ್‌, ಮುಕ್ರುಂಪಾಡಿ ಸಾಂತೋಮ್‌ ಗುರು ಮಂದಿರದ ರೆಕ್ಟರ್‌ ವಂ| ಸನ್ನಿ ಮ್ಯಾಥ್ಯು, ಪುತ್ತೂರು ಮಾಯಿದೆ ದೇವುಸ್‌ ಚರ್ಚ್‌ನ ಸಹಾಯಕ ಧರ್ಮಗುರು ವಂ| ಪ್ರವೀಣ್‌ ಡಿ’ಸೋಜಾ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ| ಸುನೀಲ್‌ ಜಾರ್ಜ್‌ ಡಿ’ಸೋಜಾ, ಬನ್ನೂರು ಚರ್ಚ್‌ ಧರ್ಮಗುರು ವಂ| ಪ್ರಶಾಂತ್‌ ಫೆರ್ನಾಂಡಿಸ್‌, ಪಂಜ ಚರ್ಚ್‌ ಧರ್ಮಗುರು ವಂ| ಅನಿಲ್‌ ಲೋಬೋ, ಸಂತ ಫಿಲೋಮಿನಾ ಪ್ರೌಢಶಾಲಾ ಶಿಕ್ಷಕ ಹಾಗೂ ಬೆಳ್ಳಾರೆ ಚರ್ಚ್‌ ಧರ್ಮಗುರು ವಂ| ಪೀಟರ್‌ ಗೊನ್ಸಾಲ್ವಿಸ್‌, ಸುಳ್ಯ ಚರ್ಚ್‌ ಧರ್ಮಗುರು ವಂ| ವಿನ್ಸೆಂಟ್‌ ಡಿ’ಸೋಜಾ, ಪುತ್ತೂರಿನ ವಂ| ಪೌಲ್‌ ಸೆಬಾಸ್ಟಿಯನ್‌, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ಮತ್ತು ವಿವಿಧ ಧಾರ್ಮಿಕ ಕೇಂದ್ರಗಳ ಧರ್ಮಗುರುಗಳು ಹಾಗೂ ಧರ್ಮ ಭಗಿನಿಯರು ಭಾಗವಹಿಸಿದ್ದರು.

ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಿವ್ಯ ಚೇತನ ಸಂಘದ ಅಧ್ಯಕ್ಷ ರಂಜಿತ್‌ ಎ. ಸ್ವಾಗತಿಸಿ, ಕಾರ್ಯದರ್ಶಿ ಮೇರಿ ಮೆಲನಿಯ ವಂದಿಸಿದರು. ಕಾಲೇಜಿನ ದಿವ್ಯ ಚೇತನ ಸಂಘದ ನಿರ್ದೇಶಕ ವಂ| ರಿತೇಶ್‌ ರೋಡ್ರಿಗಸ್‌ ಕಾರ್ಯಕ್ರಮ ನಿರ್ವಹಿಸಿದರು.

ಸಮರ್ಪಣ ಮನೋಭಾವ

ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಮಾತನಾಡಿ, ದೇವರಲ್ಲಿ ನಂಬಿಕೆ ಮತ್ತು ಕೆಲಸದಲ್ಲಿ ಸಮರ್ಪಇ ಮನೋಭಾವ ಹೊಂದುವ ಮೂಲಕ ಶೈಕ್ಷಣಿಕ ಪ್ರಗತಿ ಸುಲಭವಾಗುತ್ತದೆ. ನಮ್ಮೆಲ್ಲರ ಧನಾತ್ಮಕ ನಡೆ -ನುಡಿಗಳು ಶಿಕ್ಷಣ ಸಂಸ್ಥೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಒಯ್ಯಲಿ ಎಂದು ಹೇಳಿದರು.

LEAVE A REPLY

Please enter your comment!
Please enter your name here