Home ಧಾರ್ಮಿಕ ಸುದ್ದಿ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರ ಸಭೆ

ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರ ಸಭೆ

375
0
SHARE

ಮೂಲ್ಕಿ : ಮೂಲ್ಕಿ ಸೀಮೆಯ 32 ಗ್ರಾಮದ ಒಂಬತ್ತು ಮಾಗಣೆಯ ಗ್ರಾಮಸ್ಥರು ಬ್ರಹ್ಮಕಲಶೋತ್ಸವ ಕಾರ್ಯ ಕ್ರಮ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ ಹೇಳಿದರು.

ಅವರು ಮಾ. 23ರಂದು ನಡೆಯುವ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಬಂಧ ಕ್ಷೇತ್ರದಲ್ಲಿ ಜರಗಿದ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರ ಸಭೆಯಲ್ಲಿ ಮಾತನಾಡಿದರು.

ಬ್ರಹ್ಮಕಲಶೋತ್ಸವದ ಮೂಲಕ ದೇವರ ಸಾನಿಧ್ಯ ವೃದ್ಧಿಯಾಗುವುದಲ್ಲದೆ ಜೀರ್ಣೋ ದ್ಧಾರ ಕಾರ್ಯಕ್ರಮಗಳು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಕರ್ಷಣೆ ಮತ್ತು ಸುಂದರ ಪರಿಸರವನ್ನು ನಿರ್ಮಾಣಕ್ಕೆ ಸಹಕರಿಸುತ್ತದೆ ಎಂದರು.

ಸಮಿತಿಯ ಗೌರವಾಧ್ಯಕ್ಷ ಎಂ.ಎಚ್‌.ಅರವಿಂದ ಪೂಂಜಾ ಮಾತನಾಡಿ, ನಮ್ಮ ಸೀಮೆಯ ಆರಾಧ್ಯ ಮಾತೆಯಾಗಿರುವ ತಾಯಿ ಶ್ರೀ ದುರ್ಗಾಪರಮೇಶ್ವರೀ ನಮ ಗೆಲ್ಲರಿಗೂ ಸನ್ಮಂಗಲವನ್ನು ಉಂಟು ಮಾಡುತ್ತಾಳೆ. ಎಲ್ಲರೂ ಸೇರಿ ಕ್ಷೇತ್ರಕ್ಕೆ ಬರುವ ಭಕ್ತರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದರು.

ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಮಾತನಾಡಿ, ಎಲ್ಲರೂ ಪುಣ್ಯ ಕಾರ್ಯಕ್ರಮದಲ್ಲಿ ಕೈಜೋಡಿಸುವಂತೆ ಕೋರಿದರು.

ಮೂಲ್ಕಿ ಸೀಮೆಯ ಅರಸರು ಹಾಗೂ ದೇಗುಲದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಮಾತನಾಡಿ, ಈ ಪುಣ್ಯ ಕಾಲದಲ್ಲಿ ಸೀಮೆಯ ಜನರೆಲ್ಲರೂ ಸಮೃದ್ಧಿಯಾಗುವಲ್ಲಿ ಕೆಲವೊಂದು ಉತ್ತಮ ಸಂಪ್ರಾದಾಯದ ಕೆಲಸಗಳ ಲೋಪವನ್ನು ಸರಿಪಡಿಸಿ ಮುಂದೆ ಎಲ್ಲರಿಗೂ ಉತ್ತಮ ಶ್ರೇಯಸ್ಸು ಸಿಗುವಂತಾಗಲಿ ಎಂದರು.

ಪ್ರ.ಕಾ. ಸುನೀಲ್‌ ಎಸ್‌.ಆಳ್ವ ಸ್ವಾಗತಿಸಿ, ನಡವಳಿಕೆಗಳನ್ನು ಸಭೆಯ ಮುಂದಿಟ್ಟರು. ಸಂತೋಷ್‌ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಶೆಟ್ಟಿ, ಎಂ. ಅತುಲ್‌ ಕುಡ್ವಾ, ಬಂಡಸಾಲೆ ಶೇಖರ್‌ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಎಂ., ಸುನೀಲ್‌ ಆಳ್ವ ಉಪಸ್ಥಿತರಿದ್ದರು.

ಕ್ರೈಸ್ತ ಬಾಂಧವರ ಹೊರೆಕಾಣಿಕೆ ಮೆರವಣಿಗೆ
ಮಾ. 18ರಂದು ಬಪ್ಪನಾಡು ಕ್ಷೇತ್ರದ ಬ್ರಹ್ಮ ಕಲಶೋತ್ಸವ ನಿಮಿತ್ತ ಮೂಲ್ಕಿಯ ಕಾರ್ನಾಡು ಚರ್ಚ್‌ ಆಡಳಿತೆಯ ಮೂಲಕ ಬಪ್ಪನಾಡು ದೇವಸ್ಥಾನಕ್ಕೆ ಸಮಸ್ತ ಕೆೈಸ್ತ ಬಾಂಧವರ ಕೂಡುವಿಕೆಯಿಂದ ಬೃಹತ್‌ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಚರ್ಚ್‌ ಆಡಳಿತ ಸಮಿತಿಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here