Home ಧಾರ್ಮಿಕ ಸುದ್ದಿ ಮೂಡಬಿದಿರೆಯಲ್ಲಿ ಯುವಜನರು ರೂಪಿಸಿದ ಬೃಹತ್‌ ಮಾನವ ಶಿಲುಬೆ

ಮೂಡಬಿದಿರೆಯಲ್ಲಿ ಯುವಜನರು ರೂಪಿಸಿದ ಬೃಹತ್‌ ಮಾನವ ಶಿಲುಬೆ

1545
0
SHARE
ಬೃಹತ್‌ ಮಾನವ ಶಿಲುಬೆ

ಮೂಡಬಿದಿರೆ : ಮಂಗಳೂರು ಕ್ರೈಸ್ತಧರ್ಮ ಪ್ರಾಂತ್ಯವು ಪ್ರಸ್ತುತ ವರ್ಷವನ್ನು ಜಪಮಾಲೆ ವರ್ಷ ಎಂದು ಘೋಷಿಸಿದ್ದು ಭಾರತೀಯ ಕೆಥೋಲಿಕ್‌ ಯುವ ಸಂಚಾಲನ ಮೂಡಬಿದಿರೆ ವಲಯ ಸಮಿತಿಯ ಯುವಜನರು 700 ಜನರ ಸಹ ಭಾಗಿತ್ವದಲ್ಲಿ ಯೂತ್‌ ಕ್ರಾಸ್‌ ಕಾರ್ಯಕ್ರಮವನ್ನು ಅಲಂಗಾರು ಚರ್ಚ್‌ ವಠಾರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದರು.

ಬೃಹತ್‌ ಆಕಾರದ ಜಪಮಾಲೆಯನ್ನು ಗಾಳಿಯಲ್ಲಿ ಹಾರಿಸಿ, ಮೊಂಬತ್ತಿಗಳನ್ನು ಉರಿಸಿ, ಪ್ರಾರ್ಥನೆಯೊಂದಿಗೆ ಜಪಮಾಲೆ ವರ್ಷವನ್ನು ಉದ್ಘಾಟಿಸಲಾಯಿತು. ಡಯಾಫರೆನ್ಸ್‌ 2018 ಧ್ಯೇಯಕ್ಕೆ ಪೂರಕವಾಗಿ ಶಿಲುಬೆಯ ನೆರಳಲ್ಲಿ ಯುವಜನರು ಎಂಬ ಧ್ಯೇಯ ವಾಕ್ಯದೊಂದಿಗೆ ಚರಿತ್ರೆಯಲ್ಲೆ ಮೊದಲ ಬಾರಿಗೆ ಈ ಬೃಹತ್‌ ಮಾನವ ಶಿಲುಬೆಯನ್ನು ನಿರ್ಮಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮೂಡಬಿದಿರೆ ವಲಯದ ಪ್ರಧಾನ ರೆ| ಫಾ| ಪಾವ್ಲ್ ಸಿಕ್ವೇರ, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕ ಫಾ| ರೊನಾಲ್ಡ್‌ ಡಿ’ಸೋಜಾ, ಅಧ್ಯಕ್ಷ ಎಲ್ರೋಯ್‌ ಸಲ್ದನ್ಹಾ, ವಲಯ ನಿರ್ದೇಶಕ ಫಾ| ಜೇಸುದಾಸ್‌ ಡಿ’ಕೋಸ್ತ, ಕೆಥೋಲಿಕ್‌ ಸಭಾ ಕೇಂದ್ರೀಯ ಕೋಶಾಧಿಕಾರಿ ಜೈಸನ್‌ ಪಿರೇರಾ , ಯುವ ಸಂಚಾಲನದ ಮೂಡಬಿದಿರೆ ವಲಯ ಅಧ್ಯಕ್ಷ ರೆಕ್ಸನ್‌ ಕ್ರಾಸ್ತಾ, ಕಾರ್ಯದರ್ಶಿ ನವೀನ್‌ ಡಿ’ಸೋಜಾ, ಅಲಂಗಾರು ಘಟಕಾಧ್ಯಕ್ಷ ಫ್ರಾನ್ಸಿಸ್‌ ಸೂರಜ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here