Home ಧಾರ್ಮಿಕ ಸುದ್ದಿ ಅ. 9-21: ಶರನ್ನವರಾತ್ರಿ ಮಹೋತ್ಸವ

ಅ. 9-21: ಶರನ್ನವರಾತ್ರಿ ಮಹೋತ್ಸವ

1790
0
SHARE

ಮಾಣಿಲ : ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅ. 9ರಿಂದ 21ರ ವರೆಗೆ ವರ್ಷಂಪ್ರತಿ ಆಚರಿಸಿಕೊಂಡು ಬರುವ ಶರನ್ನವರಾತ್ರಿ ಮಹೋತ್ಸವವು ವೇ| ಮೂ| ನಯನಕೃಷ್ಣ ಭಟ್‌ ಜಾಲೂರು ಪೌರೋಹಿತ್ಯದಲ್ಲಿ ಜರಗಲಿದೆ.

ಅ. 9ರಿಂದ 20ರ ವರೆಗೆ ಪ್ರತಿದಿನವೂ ಬೆಳಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಶರನ್ನವರಾತ್ರಿ ಪೂಜೆ, ಗೋನಿವಾಸ, ನಾಗದೇವರಿಗೆ ಅಭಿಷೇಕ, ಶ್ರೀ ಕುಂಭೇಶ್ವರೀ ಪೂಜೆ ನಡೆಯಲಿದೆ. ಚಂಡಿಕಾಯಾಗ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ದೀಪ ಪ್ರತಿಷ್ಠೆ, ದುರ್ಗಾ ನಮಸ್ಕಾರ ಪೂಜೆ, ಲಲಿತಾಸಹಸ್ರ ನಾಮಾರ್ಚನೆ,
ಮಹಾಪೂಜೆ ನಡೆಯಲಿದೆ.

13ರಂದು ಲಲಿತಾ ಪಂಚಮಿ, ಲಲಿತಾ ಯಾಗ, ಮಂಜೇಶ್ವರ ಶಾರದಾ ಆರ್ಟ್ಸ್ ಕಲಾವಿದರಿಂದ ತಿರ್ಗ್‌ದ್‌ ತೂಲೆ ಎಂಬ ತುಳು ನಾಟಕ, 15ರಂದು ಶಾರದಾ ಪೂಜಾರಂಭ, ಸರಸ್ವತೀ ಯಾಗ, 16ರಂದು ಯಕ್ಷಗಾನ ಮೋಕ್ಷ ಸಂಗ್ರಾಮ, ಅ.18ರಂದು ಮಹಾನವಮಿ, ಆಯುಧ ಪೂಜೆ ನೆರವೇರಲಿದೆ.

20ರಂದು ಬೆಳಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಶ್ರೀ ಕುಂಭೇಶ್ವರೀ ಪೂಜೆ, ಗೋನಿವಾಸ, ನಾಗದೇವರಿಗೆ ಅಭಿಷೇಕ, ನವಗ್ರಹಶಾಂತಿ ಹವನ, ಅಷ್ಟಲಕ್ಷ್ಮೀ ಯಾಗ, ಮಹಾಚಂಡಿಕಾ ಯಾಗ, ಸೌಂದರ್ಯ ಲಹರೀ ಯಾಗ, ದತ್ತ ಯಾಗ, 12ಕ್ಕೆ ಶ್ರೀಗಳಿಂದ ಮಧುಕರೀ, ಸ್ವರ್ಣಮಂತ್ರಾಕ್ಷತೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಕಲ್ಲಡ್ಕ ವಿಟಲ ನಾಯಕ್‌ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, 4.30ಕ್ಕೆ ನಗೆಹಬ್ಬ ನಡೆಯಲಿದೆ.

ಸಂಜೆ 5.30ರಿಂದ ದೀಪಾರಾಧನೆ, ದುರ್ಗಾ ನಮಸ್ಕಾರ ಪೂಜೆ, ಆಶ್ಲೇಷಾ ಬಲಿ, ಲಲಿತಾ ಸಹಸ್ರನಾಮಾರ್ಚನೆ, ನಾಗತನು ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 10.30ಕ್ಕೆ ಕಟೀಲು ಮತ್ತು ಧರ್ಮಸ್ಥಳ ಮೇಳಗಳ ಕಲಾವಿದರಿಂದ ಯಕ್ಷಗಾನ ಬಯಲಾಟ, 21ರಂದು ಸೀಯಾಳ ಅಭಿಷೇಕ, ಅನಂತರ
ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಅವರಿಂದ ನಾಗದರ್ಶನವಿದೆ.

LEAVE A REPLY

Please enter your comment!
Please enter your name here