Home ನಂಬಿಕೆ ಸುತ್ತಮುತ್ತ 8ನೇ ಗುರು; ಭ್ರಮೆಯಲ್ಲಿ ತೇಲಾಡುತ್ತಿರುವ ನಾವು ಪಾರಿವಾಳದ ಕಥೆ ತಿಳಿದುಕೊಳ್ಳಬೇಕು!

8ನೇ ಗುರು; ಭ್ರಮೆಯಲ್ಲಿ ತೇಲಾಡುತ್ತಿರುವ ನಾವು ಪಾರಿವಾಳದ ಕಥೆ ತಿಳಿದುಕೊಳ್ಳಬೇಕು!

3695
0
SHARE

ಶ್ರೀಮದ್ಭಾಗವತದಲ್ಲಿ ಗ್ರಹಸ್ಥಾಶ್ರಮವು ಹೇಗಿರುತ್ತದೆ? ಮತ್ತು ಮಾನವನು ತಾನು ಕಾಮ, ಕ್ರೋಧ, ಮದಗಳಿಂದ ಹೇಗೆ ಬಂಧಿಯಾಗುತ್ತಾನೆ ಎಂಬುದನ್ನು ಪಾರಿವಾಳದ ಕಥೆಯೊಂದರ ಮೂಲಕ ವಿವರಿಸಲಾಗಿದೆ. ಎಲ್ಲಿ ನಾವು ಮೋಹಕ್ಕೊಳಗಾಗುತ್ತೇವೆಯೋ ಅಲ್ಲಿ ನಿಧಾನವಾಗಿ ಕಾಮನೆಗಳು ಹೆಚ್ಚುತ್ತ ಹೋಗುತ್ತವೆ. ನಿಧಾನವಾಗಿ ಎಲ್ಲಾ ಅರಿಷಡ್ವರ್ಗಗಳು ನಮ್ಮನ್ನು ಇಡಿಯಾಗಿ ಆವರಿಸಿಬಿಡುತ್ತವೆ. ಅದರಿಂದ ಹೊರಬರಲಾರದೆ ಮುಕ್ತಿಯನ್ನು ಹೊಂದದೆ ಬದುಕು ಕೊನೆಯಾಗುತ್ತದೆ. ಹಾಗಾಗಿ ಯಾವುದೇ ವಸ್ತು ಅಥವಾ ಯಾರ ಜೊತೆಯಾದರೋ ಅತಿಯಾದ ಆಸಕ್ತಿಯನ್ನು ಇಟ್ಟುಕೊಂಡಾಗ ನಾವು ಸಹಜವಾಗಿಯೇ ಕ್ಲೇಶವನ್ನು ಅನುಭವಿಸಬೇಕಾಗುತ್ತದೆ. ಅದನ್ನು ಉದಾಹರಿಸುತ್ತ ಪಾರಿವಾಳದ ಬದುಕನ್ನು ಹೇಳಲಾಗಿದೆ.

ಸ್ವಚ್ಛಂದವಾಗಿ ಹಾರಿಕೊಂಡಿದ್ದ ಒಂದು ಗಂಡು ಪಾರಿವಾಳವು ತನ್ನಷ್ಟಕ್ಕೆ ಇದ್ದ ಹೆಣ್ಣು ಪಾರಿವಾಳವೊಂದರ ಸೌಂದರ್ಯಕ್ಕೆ ಸೋತು ನಿಧಾನವಾಗಿ ಅದನ್ನು ಮೋಹಿಸಲು ಆರಂಭಿಸುತ್ತದೆ. ಪರಸ್ಪರ ಮೋಹಕ್ಕೆ ಒಳಗಾಗಿ ಒಂದು ಇನ್ನೊಂದನ್ನು ಬಿಟ್ಟಿರಲಾರದ ಹಂತವನ್ನು ತಲುಪಿದಾಗ ಇಬ್ಬರೂ ಒಂದಾಗಿ ಬಾಳುವ ನಿರ್ಧಾರಕ್ಕೆ ಬರುತ್ತವೆ. ಆ ಜೋಡಿಗೆ ಮರಿ ಪಾರಿವಾಳಗಳು ಹುಟ್ಟಿ, ಒಂದು ಚಿಕ್ಕ ಸಂಸಾರವಾಗುತ್ತದೆ. ಆಗ ಮಕ್ಕಳಿಗಾಗಿ ಆಹಾರ ತರಲು ಎರಡೂ ಪಾರಿವಾಳಗಳು ಕಾಡನ್ನು ಸುತ್ತುವುದರಲ್ಲೇ ತಮ್ಮ ಸಮಯವನ್ನು ಕಳೆಯಬೇಕಾಗಿ ಬರುತ್ತದೆ. ಒಂದು ದಿನ ತಾಯಿ ಪಾರಿವಾಳ ಬಂದು ನೋಡುವಾಗ ಅದರ ಮರಿಗಳು ಬೇಡನ ಬಲೆಯೊಂದರಲ್ಲಿ ಸಿಲುಕಿ ಕೊಂಡಿರುತ್ತವೆ. ಇದರಿಂದ ತುಂಬಾ ದುಃಖಿತವಾದ ಆ ಪಾರಿವಾಳ ತಾನು ಮಕ್ಕಳನ್ನು ಬಿಟ್ಟಿರಲಾರೆ ಎನ್ನುತ್ತ ಮಕ್ಕಳನ್ನು ಹಿಡಿದುಕೊಳ್ಳಲು ಹೋಗಿ ಆ ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುತ್ತದೆ. ಇದನ್ನು ಕಂಡ ಗಂಡು ಪಾರಿವಾಳ ಒಮ್ಮೆ ತಾನು ದೂರಹೋಗಿಬಿಡುವ ನಿರ್ಧಾರ ಮಾಡಿತಾದರೂ ಮಡದಿ-ಮಕ್ಕಳ ಮೋಹದಿಂದಾಗಿ ತಾನೂ ಇವರೊಟ್ಟಿಗೆ ಹೋಗುತ್ತೇನೆ ಎಂದು ನಿರ್ಧರಿಸಿ ಆ ಬಲೆಯೊಳಕ್ಕೆ ಹಾರುತ್ತದೆ. ಬೇಟೆಗಾರ ಇಡಿ ಪಾರಿವಾಳದ ಕುಟುಂಬವೇ ದೊರಕಿತು ಎಂಬ ಸಂತಸದಲ್ಲಿ ಹೊತ್ತೊಯ್ದ. ಈ ಬಗೆಯ ಕೊನೆಯನ್ನು ಕಾಣುವುದಕ್ಕೆ ಕಾರಣವಾದದ್ದು ಮೋಹ ಮತ್ತು ಅತಿಯಾದ ವಿಷಯಾಸಕ್ತಿಗಳೇ ಆಗಿವೆ. ಮಧುರ ಎಂದುಕೊಂಡು ಈ ಪಾರಿವಾಳದ ದಂಪತಿ ಬದುಕಿದ ರೀತಿಯು ಇಹ-ಪರಲೋಕಗಳನ್ನು ಅರಿಯದೆ ಅಜ್ಞಾನಕ್ಕೊಳಗಾಗಿ ಅವನತಿ ಹೊಂದಿದವು.

ಈ ಕಥೆಯಲ್ಲಿ ಪಾರಿವಾಳ ಎಂಬುದು ಕೇವಲ ಸೂಚಕ ಮಾತ್ರ. ಮಾನವನು ಕೂಡ ಈ ಪಾರಿವಾಳಗಳಂತೆ ವಿಷಯಾಸಕ್ತಿಗಳಲ್ಲಿ ತೊಡಗಿಕೊಂಡು ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಸುಖವನ್ನು ಅರಸುತ್ತ ಚಿತ್ತಚಂಚಲನಾದವನು ಕೇವಲ ತನ್ನ ಪರಿವಾರವನ್ನು ಸಾಕುವುದರಲ್ಲಿಯೇ ತೊಡಗಿಕೊಂಡು ದೀನ ಅವಸ್ಥೆಗೆ ತಳ್ಳಲ್ಪಡುತ್ತಾನೆ. ಈ ಮನುಷ್ಯ ಶರೀರವನ್ನು ಮುಕ್ತಿಯ ದ್ವಾರವೆಂದು ತಿಳಿದುಕೊಂಡು, ಮುಕ್ತಿಯನ್ನು ಹೊಂದಲು ಪ್ರಯತ್ನಿಸಬೇಕು ಎಂಬುದನ್ನು ಇದು ಸಾರುತ್ತದೆ. ಎಷ್ಟೋ ಸಂಗತಿಗಳನ್ನು ನಾವು ಯೋಚಿಸುತ್ತಾ ಹೋದಾಗ ಸುಖಾಸುಮ್ಮನೆ ಅವುಗಳಿಗಾಗಿ ನಾವು ನಮ್ಮ ಸಂತೋಷವನ್ನು ಕಳೆದುಕೊಳ್ಳುತ್ತಿರುವುದು ಅರಿವಾಗುತ್ತದೆ. ಮೋಹವೆಂಬುದು ಪಕ್ಕಾ ಕುರುಡುತನ. ಕಣ್ಣಿದ್ದೂ ಕಾಣಲಾಗದಂತಹ ಸ್ಥಿತಿ. ಅಂತಹ ಸ್ಥಿತಿಯಲ್ಲಿ ನಾವು ಸುಖದ ಮರೀಚಿಕೆಯ ಅಥವಾ ಭ್ರಮೆಯಲ್ಲಿ ತೇಲಾಡುತ್ತಿರುತ್ತೇವೆಯೇ ಹೊರತು ನಿಜಸ್ಥಿತಿಯನ್ನಲ್ಲ ಎಂಬುದನ್ನು ಈ ಪಾರಿವಾಳದ ಕಥೆಯು ಹೇಳುವ ಪಾಠ. ಕೊನೆಯಲ್ಲಿ ಅದೇ ಮೋಹವು ಅವುಗಳಿಗೆ ನರಳಿಸಾಯುವಂತಹ ನರಕಕ್ಕೆ ತಳ್ಳುತ್ತದೆ. ಮನುಷ್ಯನೂ ಇದರಿಂದ ಹೊರತಲ್ಲ. ಹಾಗಾಗಿ ಬದುಕಿನ ಅರ್ಥವನ್ನು ಅರಿತು ಬದುಕುವುದು ಉತ್ತಮ.

..ಮುಂದುವರಿಯುವುದು.
||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here