Home ಧಾರ್ಮಿಕ ಸುದ್ದಿ ಗಂಗೊಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನದ 350ನೇ ಪ್ರತಿಷ್ಠಾ ಮಹೋತ್ಸವ

ಗಂಗೊಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನದ 350ನೇ ಪ್ರತಿಷ್ಠಾ ಮಹೋತ್ಸವ

ಸಂಪಾದನೆಯ ಅಲ್ಪ ಅಂಶ ದೇವಸ್ಥಾನಕ್ಕೆ ನೀಡಿ: ಪರ್ತಗಾಳಿ ಶ್ರೀ

1672
0
SHARE

ಕುಂದಾಪುರ : ಎಲ್ಲರೂ ಒಟ್ಟು ಸೇರುವ ಧಾರ್ಮಿಕ ಸ್ಥಳವೇ ದೇವಸ್ಥಾನ. ನಾವು ಸಂಪಾದಿಸಿದ ಸ್ವಲ್ಪ ಅಂಶವನ್ನು ದೇವರು, ದೇವಸ್ಥಾನಗಳಿಗೆ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಚಪರ್ವ ಸಹಿತ ವಿವಿಧ ಧಾರ್ಮಿಕ ಅನುಷ್ಠಾನ ನಡೆಯುತ್ತಿದ್ದು, ದೇವಸ್ಥಾನದ ವಾಸ್ತುವಿಸ್ತಾರದ ದೃಷ್ಟಿಯಿಂದ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಧೀಶ ಶ್ರೀಮದ್‌ ವಿದ್ಯಾ ರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಹೇಳಿದರು.

ಅವರು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದ್ವಾರಕನಾಥತೀರ್ಥ ಕಲ್ಯಾಣ ಮಂಟಪದಲ್ಲಿ ಶ್ರೀದೇವರ ಪ್ರತಿಷ್ಠಾಪನೆಯ 350ನೇ ವರ್ಷದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಶ್ರೀಮದ್‌ ವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪುತ್ತು ಪೈ ಭಟ್ಕಳ, ಎಂ. ಜಗನ್ನಾಥ ಪೈ ಬೆಂಗಳೂರು, ಜಿ.ಎಸ್‌. ಕಾಮತ್‌ ಕುಮಟಾ, ಯು. ನಾರಾಯಣ ಪೈ ಮುಂಬಯಿ, ಸಂಜಯ ಪೈ, ಭಾಯ್‌ ನಾಯಕ್‌ ಮಡಗಾಂವ್‌, ಎಸ್‌. ಪ್ರಭಾಕರ್‌ ಕಾಮತ್‌ ಮಂಗಳೂರು ಉಪಸ್ಥಿತರಿದ್ದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಎನ್‌. ಸದಾಶಿವ ನಾಯಕ್‌ ಸ್ವಾಗತಿಸಿದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸಲಹೆಗಾರ ಎಚ್‌. ಗಣೇಶ ಕಾಮತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಜಿ. ವೇದವ್ಯಾಸ ಕೆ. ಆಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here