Home ಧಾರ್ಮಿಕ ಸುದ್ದಿ ಅಂತರಗುತ್ತು ದೈವಗಳ ಚಾವಡಿ ಜೀರ್ಣೋದ್ಧಾರ ಶಿಲಾನ್ಯಾಸ

ಅಂತರಗುತ್ತು ದೈವಗಳ ಚಾವಡಿ ಜೀರ್ಣೋದ್ಧಾರ ಶಿಲಾನ್ಯಾಸ

2302
0
SHARE

ಕಲ್ಲಡ್ಕ : ವೀರಕಂಭ ಗ್ರಾಮದ ಅಂತರಗುತ್ತು ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಚಾವಡಿ ಜೀರ್ಣೋದ್ಧಾರಕ್ಕಾಗಿ ಗ್ರಾಮ ತಂತ್ರಿಗಳಾದ ಪಳನೀರು ಅನಂತ ಭಟ್‌ ಪೌರೋಹಿತ್ಯದಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ನಡೆಯಿತು.

ಗ್ರಾಮದೈವಕ್ಕೆ ಸಂಬಂಧಿಸಿದ ನಾಲ್ಕು ಗುತ್ತು, ಮೂರು ಗ್ರಾಮ, ಒಂಭತ್ತು ಚಾವಡಿ, ಹದಿನಾರು ಕಂಬಳದ ಮುಖ್ಯಸ್ಥರು ಒಳಗೊಂಡ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ. ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಈ ಚಾವಡಿಯ ಪುನರ್‌ ನಿರ್ಮಾಣ ಮಾಡಿ ಜೀರ್ಣೋದ್ಧಾರ ಮಾಡಲು ಸಂಕಲ್ಪಿಸಿದ್ದು ಅದರಂತೆ ಜೀರ್ಣೋದ್ಧಾರ ಸಮಿತಿ ಸರ್ವ ಸದಸ್ಯರು, ಗ್ರಾಮಸ್ಥರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆಯಿತು.

LEAVE A REPLY

Please enter your comment!
Please enter your name here